Yeshwantpur – Karwar train: ಯಶವಂತಪುರ- ಕಾರವಾರ ಹಗಲು ರೈಲಿನ ಓಡಾಟ ರದ್ದತಿ: ಡಿಸೆಂಬರ್ 16ರ ವರೆಗೆ ವಿಸ್ತರಣೆ

ಯಶವಂತಪುರ ಹಾಗೂ ಕಾರವಾರ ನಡುವೆ ವಾರದಲ್ಲಿ ಮೂರು ದಿನ ಹಗಲಿನಲ್ಲಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ರದ್ದತಿಯನ್ನು ಡಿಸೆಂಬರ್ 16ರ ವರೆಗೆ ವಿಸ್ತರಿಸಲು ದಕ್ಷಿಣ-ಪಶ್ಚಿಮ ರೈಲ್ವೆ (ನೈರುತ್ಯ ರೈಲ್ವೆ) ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದ

ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ನಡುವೆ ಸೋಮವಾರ, ಬುಧವಾರ, ಶುಕ್ರವಾರ ಸಂಚರಿಸುತ್ತಿದ್ದ ರೈಲಿನ ಸಂಚಾರದ ರದ್ದತಿಯ ಅವಧಿಯನ್ನು ನವೆಂಬರ್ 3 ರಿಂದ ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ.

16516 ಕಾರವಾರ- ಯಶವಂತಪುರ ನಡುವೆ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಸಂಚರಿಸುತ್ತಿದ್ದ ರೈಲಿನ ಸಂಚಾರದ ರದ್ದತಿಯ ಅವಧಿಯನ್ನು ನವೆಂಬರ್ 4 ರಿಂದ ಡಿಸೆಂಬರ್ 16 ರವರೆಗೆ ವಿಸ್ತರಿಸಲಾಗಿದೆ.

ಇದರಿಂದ ಎರಡೂ ರೈಲುಗಳ ತಲಾ 19 ಟ್ರಿಪ್‌ಗಳು ರದ್ದಾಗಿವೆ. ಕಳೆದ ಜೂನ್ ಹಾಗೂ ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉಂಟಾದ ಭೂಕುಸಿತ, ಗುಡ್ಡ ಕುಸಿತದಿಂದ ಹಗಲು ಸಂಚರಿಸುತ್ತಿದ್ದ ಈ ರೈಲಿನ ಸಂಚಾರವನ್ನು ರದ್ದು ಮಾಡಲಾಗಿತ್ತು. ಮಂಗಳೂರು-ಹಾಸನ ರೈಲ್ವೆ ಮಾರ್ಗದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ನಡುವೆ ರೈಲ್ವೆ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಈಗ ನಡೆಯುತ್ತಿದ್ದು, ಅದನ್ನು ಪೂರ್ಣಗೊಳಿಸುವ ಉದ್ದೇಶದಿಂದ ರೈಲು ಸಂಚಾರದ ಅವಧಿಯನ್ನು 44 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಮೂಲಗಳು ತಿಳಿಸಿವೆ.

Rakesh arundi

Leave a Reply

Your email address will not be published. Required fields are marked *