Pawan-kalyan: ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟ; ತಲ್ವಾರ್ ಹಿಡಿದು ವಿಕೃತಿ ಮೆರೆದ ಫ್ಯಾನ್ಸ್
ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ಕಾಲ್ ಹಿಮ್ ಒಜಿ’ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ಪವನ್ ಕಲ್ಯಾಣ್ ಫ್ಯಾನ್ಸ್ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಬೆಂಗಳೂರಿನ ಸಂಧ್ಯಾ ಥಿಯೇಟರ್ ಬಳಿ ಅಭಿಮಾನಿಗಳು ಲಾಂಗ್ ಹಿಡಿದು ಕಿರುಚಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಇದರಿಂದ ಸಿನಿಮಾ ನೋಡಲೆಂದು ಬಂದ ಇತರೆ ಅಭಿಮಾನಿಗಳು ಭೀತಿಗೊಂಡ ಘಟನೆ ನಡೆದಿದೆ. ಇದರಿಂದ ಕೆಲಕಾಲ ಚಿತ್ರಮಂದಿರದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಯಿತು.
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಈ ತಲ್ವಾರ್ ಡಾನ್ಸ್ ಸ್ಥಳೀಯರಿಂದ ವೈರಲ್ ಆಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಮಡಿವಾಳ ಪೊಲೀಸರು ಆಗಮಿಸಿ ವಿಚಾರಿಸಿದ್ದಾರೆ. ಸಿನಿಮಾ ಕ್ರೇಜ್ಗೆ ಫ್ಯಾನ್ಸ್ ಜಯನಗರದಲ್ಲಿ 200ರೂಪಾಯಿ ಕೊಟ್ಟು ಪ್ಲಾಸ್ಟಿಕ್ ತಲ್ವಾರ್ ಖರೀಸಿರೊದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಟೌಟ್ ಮುಂದೆ ಫೋಟೋ ತೆಗೆದುಕೊಳ್ಳಲು ಪ್ಲಾಸ್ಟಿಕ್ ತಲ್ವಾರ್ ತರಲಾಗಿದೆ ಎನ್ನಲಾಗ್ತಿದೆ. ಆದರೆ ತಲ್ವಾರ್ ನೋಡಿದ ಇತರೆ ಸಿನಿ ಪ್ರೇಕ್ಷಕರು ಒಂದು ಕ್ಷಣ ಗಾಬರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.