lover killed canal: ಭದ್ರಾ ಕಾಲುವೆಯಲ್ಲಿ ಪ್ರೇಯಸಿಯ ಕೊಲೆಗೈದ ಪ್ರಿಯಕರ..!

ಮದುವೆಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಪ್ರಿಯಕರನೇ ಕೊಂದಿರುವ ಆಘಾತಕಾರಿ ಘಟನೆ ಭದ್ರಾವತಿಯಲ್ಲಿ ನಡೆದಿದೆ. ತಿರುಗಾಡಿಕೊಂಡು ಬರೋಣ ಅಂತ ಹೇಳಿ ಪ್ರೇಯಸಿ ಸ್ವಾತಿಯನ್ನು ಭದ್ರಾವತಿ ತಾಲೂಕಿನ ಯಕ್ಕಂದ ಗ್ರಾಮದ ಬಳಿ ಭದ್ರಾ ಕಾಲುವೆಯ ಹತ್ತಿರಕ್ಕೆ ಪ್ರಿಯಕರ ಸೂರ್ಯ ಕರೆದುಕೊಂಡು ಹೋಗಿದ್ದಾನೆ.

ಈ ವೇಳೆ ಮದುವೆ ವಿಚಾರ ಪ್ರಸ್ತಾಪವಾಗಿದೆ. ಇದಕ್ಕೆ ಸ್ವಾತಿ ಸದ್ಯಕ್ಕೆ ಮದುವೆ ಬೇಡ ಅಂತ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಸೂರ್ಯ ಆಕೆಯನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಸೂರ್ಯ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಸೂರ್ಯ, ಸ್ವಾತಿ ಇಬ್ಬರೂ ಕೂಡ ಪದವಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. 

ಆದರೆ ಸ್ವಾತಿ ಮತ್ತು ಆಕೆಯ ಪ್ರಿಯಕರ ಸೂರ್ಯನ ಮದುವೆಗೆ ಕಟುಂಬಸ್ಥರ ವಿರೋಧವಿತ್ತು. ಇದನ್ನು ತಿಳಿದ ಯುವತಿ ಸೂರ್ಯನನ್ನು ದೂರ ಮಾಡಿದ್ದಳು. ಇದರಿಂದ ಕೋಪಗೊಂಡ ಸೂರ್ಯ ಈ ದುಷ್ಕೃತ್ಯ ಎಸಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕ ಸೂರ್ಯ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಸೂರ್ಯನ ತಂದೆ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *