Mother baby seals fevikwic: 15 ದಿನದ ನವಜಾತ ಶಿಶುವಿನ ಬಾಯಿಗೆ ಕಲ್ಲು ಇಟ್ಟು `ಫೆವಿಕ್ವಿಕ್’ ಹಚ್ಚಿ ಸೀಲ್ ಮಾಡಿ ಕ್ರೂರಿ ತಾಯಿ
ಮಹಿಳೆಯೊಬ್ಬಳು ತನ್ನ 15 ದಿನದ ನವಜಾತ ಶಿಶುವಿನ ಬಾಯಿಗೆ ಕಲ್ಲು ಇಟ್ಟು ಫೆವಿಕ್ವಿಕ್ ಹಾಕಿ ಬಾಯಿ ಸೀಲ್ ಮಾಡಿದ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಬಿಜೋಲಿಯಾ ಉಪವಿಭಾಗದ ಮಾಲ್ ಕಾ ಖೇಡಾ ರಸ್ತೆಯಲ್ಲಿರುವ ಸೀತಾಕುಂಡ್ ಕಾಡಿನಲ್ಲಿ, ತಾಯಿಯೊಬ್ಬಳು ತನ್ನ 10-15 ದಿನಗಳ ಮಗುವಿನ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿಯನ್ನು ಬಂದ್ ಮಾಡಿ, ಕಲ್ಲುಗಳ ಮೇಲೆ ಹಾಕಿ ಹೋಗಿದ್ದಾಳೆ. ಬಳಿಕ ಕಾಡಿನಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿಯೊಬ್ಬರು ಮಗುವನ್ನು ನೋಡಿ ಮಗುವಿನ ಜೀವ ಉಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ, ಕಾಡಿನಲ್ಲಿ ವ್ಯಕ್ತಿಯೊಬ್ಬರು ಕುರಿ ಮೇಯಿಸುತ್ತಿದ್ದ ವೇಳೆ ಬಂಡೆಗಳ ನಡುವೆ ಮಗು ಅಳುವ ಕೂಗು ಕೇಳಿಸಿದೆ. ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ಕಲ್ಲುಗಳ ಮೇಲೆ ಗಂಡು ಮಗು ಇರುವುದನ್ನು ಕಂಡುಬಂದೆ. ಬಳಿಕ ಮಗುವನ್ನುಕರೆದುಕೊಂಡು ಹೋಗಿ ಹತ್ತಿರದ ದೇವಾಲಯದಲ್ಲಿದ್ದ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ.
ಗ್ರಾಮಸ್ಥರು ಬಿಜೋಲಿಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಾಯದಿಂದ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಬಾಯಿಯಲ್ಲಿ ಕಲ್ಲನ್ನು ತುರುಕಿ ಫೆವಿಕ್ವಿಕ್ನಿಂದ ಮುಚ್ಚಿ, ಫೆವಿಕ್ವಿಕ್ನ್ ಕವರನ್ನು ಅಲ್ಲೇ ಹಾಕಿಹೋಗಿದ್ದಾಳೆ.
ಪೊಲೀಸರು ನವಜಾತ ಶಿಶುವನ್ನು ಆಂಬ್ಯುಲೆನ್ಸ್ ಸಹಾಯದಿಂದ ಬಿಜೋಲಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾದಾಗ, ಅವನನ್ನು ಭಿಲ್ವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗೆ. ಸದ್ಯ ಮಗುವಿನ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯರ ವರದಿ ತಿಳಿಸಿದೆ. ಆದರೆ ಬಿಸಿ ಕಲ್ಲುಗಳು ಮೇಲೆ ಮಲಗಿದಿಸಿದ ಕಾರಣ ಅವನ ದೇಹದ ಎಡಭಾಗಕ್ಕೆ ಸುಟ್ಟ ಗಾಯಗಳಾಗಿವೆ.
ಬಿಜೋಲಿಯಾ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಶಂಕಿತರನ್ನು ಪ್ರಶ್ನಿಸುತ್ತಿದ್ದಾರೆ.