Sports pakistan suryakumar; ಪಾಕ್‌ ನಮಗೆ ಲೆಕ್ಕಕ್ಕೆ ಇಲ್ಲ-ಸೂರ್ಯಕುಮಾರ್‌ ,ಪಾಕ್‌ ಟೀಮ್‌ಗೆ ಭಾರೀ ಮುಖಭಂಗ ನರಿಬುದ್ಧಿಯ ದೇಶಕ್ಕೆ ತಕ್ಕಪಾಠ.!

ನಂಬಿಕೆ ದ್ರೋಹಿ ಪಾಕಿಸ್ಥಾನದ ನೀಚ ಬುದ್ದಿಗೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಇಂಡಿಯಾ ಕ್ರಿಕೆಟ್‌ ಟೀಮ್‌ ಕೌಂಟರ್‌ ಮೇಲೆ ಕೌಂಟರ್‌ ನೀಡೋ ಮೂಲಕ ತಕ್ಕ ಪಾಠ ಕಲಿಸ್ತಾ ಇದೆ. ಮೋಸದಿಂದ ನರಿ ಬುದ್ದಿ ತೋರಿ ಬೆನ್ನಿಗೆ ಚೂರಿ ಹಾಕೋ ಕಳ್ಳ ಪಾಕಿಸ್ಥಾನಕ್ಕೆ ಏಷ್ಯಾ ಕಪ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಬುದ್ದಿ ಕಲಿಸ್ತಾ ಇದ್ದು, ಇದೀಗ ಇಂಡಿಯಾ ಟೀಮ್‌ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಕೂಡ ಮಾಧ್ಯಮಗಳ ಮುಂದೆ ಪಾಕ್‌ ಟೀಮ್‌ ಬಗ್ಗೆ ವ್ಯಂಗದ ಮಾತುಗಳನ್ನಾಡಿದ್ದಾರೆ.

ಪಾಕ್‌ ಟೀಮ್‌ನಾ ನಾವು ಹೇಗೆ ನೋಡ್ತೀವಿ ಅಂತಾ ಮಾಧ್ಯಮಗಳ ಪ್ರಶ್ನೆಗೆ ಸೂರ್ಯಕುಮಾರ್‌ ಯಾದವ್‌ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟಿದ್ದಾರೆ. ಈ ಉತ್ತರ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪಾಕ್‌ ಟೀಮ್‌ ಕ್ಷಮತೆಯ ಬಗ್ಗೆಯೇ ಪ್ರಶ್ನೆ ಮಾಡುವಂತಾಗಿದೆ.

ಅಸಲಿಗೆ ಸೂರ್ಯಕುಮಾರ್‌ ಹೇಳಿದ್ದೇನು.? ಈ ಬಾರಿಯ ಏಷ್ಯಾಕಪ್‌ನಲ್ಲಿ ಏನೆಲ್ಲಾ ಸ್ಲೆಡ್ಜಿಂಗ್‌ ದೃಶ್ಯಗಳು ಸೆನ್ಸೇಷನ್‌ ಹುಟ್ಟು ಹಾಕಿದ್ವು ಅನ್ನೋದನ್ನು ನೋಡ್ತಾ ಹೋಗೋಣ.

ಆರಂಭದಿಂದ್ಲೂ ಭಾರತೀಯ ಕ್ರಿಕೆಟ್‌ ಪ್ರೇಮಿಗಳೆಲ್ಲಾ ಏಷ್ಯಾಕಪ್‌ನಲ್ಲಿ ಇಂಡೋ-ಪಾಕ್‌ ಪಂದ್ಯಕ್ಕೆ ಅವಕಾಶ ಕೊಡಬಾರದು. ಭಾರತ ಪಾಕ್‌ ಜೊತೆ ಆಡೋದನ್ನು ನಾವು ಒಪ್ಪೋದಿಲ್ಲ. ಇದು ದೇಶದ್ರೋಹ ಮಾಡಿದಂತೆ ಎಂದು ಭಾರೀ ವಿರೋಧ ಕೇಳಿಬಂದಿತ್ತು. ಕ್ರಿಕೆಟ್‌ ದುಡ್ಡಿನ ಆಟ, ರಾಷ್ಟ್ರಭಕ್ತಿಯೇ ಮಾರಟವಾಗಿದೆ ಅಂತೆಲ್ಲಾ ವಿರೋಧದ ಮಾತುಗಳು ಕೇಳಿ ಬಂದ್ವು.

ಆದ್ರೆ, ಬಿಸಿಸಿಐ ಮಾತ್ರ ಪಿಚ್‌ನಲ್ಲಿ ಇದಕ್ಕೆಲ್ಲಾ ತಕ್ಕ ಉತ್ತರ ಕೊಡೋದಕ್ಕೆ ಮಾಸ್ಟರ್‌ ಪ್ಲಾನ್‌ ಕೂಡ ಮಾಡಿತ್ತು. ಎಲ್ಲದಕ್ಕೂ ಬ್ಯಾಟ್‌ ಮುಖಾಂತರವೇ ಉತ್ತರ ನೀಡಲು ಸಜ್ಜಾಗಿದ್ದ ಇಂಡಿಯಾ ಟೀಮ್‌ ಮಾತ್ರ ಇಡೀ ಪ್ರಪಂಚದ ಮುಂದೆ ಪಾಕ್‌ ಟೀಮ್‌ನಾ ನೆಗೆಪಾಟಲು ಮಾಡಿಬಿಡ್ತು. ಅದಕ್ಕೆ ಕಾರಣ ಕೂಡ ಇದೆ.

ಕೋಚ್‌ ಗಂಭೀರ್‌ ನೇರವಾಗಿ ಇಂಡಿಯಾ ಟೀಮ್‌ ಆಟಗಾರರಿಗೆ ಸ್ಟ್ರಿಕ್‌ ಆಗಿ ಸಲಹೆ ಸೂಚನೆಗಳನ್ನು ನೀಡದ್ರು. ಯಾರಿಗೂ ಶೇಕ್‌ ಹ್ಯಾಂಡ್‌ ಕೂಡ ನೀಡದೇ ಪಹಲ್ಗಾಮ್‌ ದುರಂತದ ಘಟನೆಗೆ ಪ್ರತೀಕಾರ ಸೂಚಿಸಿ, ಹುತಾತ್ಮ ಭಾರತೀಯರಿಗೆ ಸಮರ್ಪಣೆ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಸಿದ್ದವಾಗಿತ್ತು. ಆಗಾಗಿ ಎಲ್ಲೂ ಕೂಡ ಶೇಕ್‌ ಹ್ಯಾಂಡ್‌ ಮಾಡದೇ ಕಿಟಕಿಯ ಬಾಗಿಲು ಮುಚ್ಚಿ ಡ್ರೆಸ್ಸಿಂಗ್‌ ರೂಮ್‌ ಸೇರಿತ್ತು.

ಇನೊಂದ್ಕಡೆ, ಅಭಿಶೇಕ್‌ ಶರ್ಮಾ ಜೊತೆ ಜಗಳಕ್ಕಿಳಿದಿದ್ದ ಪಾಕ್‌ ಆಟಗಾರ ಹ್ಯಾರಿಸ್‌ ರೌಫ್‌ ಸಿಕ್ಸ್‌ ಲೈನ್‌ನಲ್ಲಿ ನಿಂತಿದ್ದ ವೇಳೆ, ಫ್ಯಾನ್ಸ್‌ ಎಲ್ಲಾ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದಕ್ಕೆ ತಾಳ್ಮೆ ಕಳೆದುಕೊಂಡ ಹ್ಯಾರಿಸ್‌ ರೌಫ್‌, ಕೈಯಲ್ಲಿ 06 -00 ಎಂದು ಬೆರಳು ಮೂಲಕ ಸನ್ನೆ ಮಾಡಿ ವ್ಯಂಗವಾಡಿದ್ರು. ಅದರ್ಥ. ಪಹಲ್ಮಾಮ್‌ ಪ್ರತೀಕಾರದ ದಾಳಿಯಲ್ಲಿ ಆಪರೇಷನ್‌ ಸಿಂಧೂರ್‌ ಇನೊಂದ್ಕಡೆ, ಅಭಿಶೇಕ್‌ ಶರ್ಮಾ ಜೊತೆ ಜಗಳಕ್ಕಿಳಿದಿದ್ದ ಪಾಕ್‌ ಆಟಗಾರ ಹ್ಯಾರಿಸ್‌ ರೌಫ್‌ ಸಿಕ್ಸ್‌ ಲೈನ್‌ನಲ್ಲಿ ನಿಂತಿದ್ದ ವೇಳೆ, ಫ್ಯಾನ್ಸ್‌ ಎಲ್ಲಾ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದಕ್ಕೆ ತಾಳ್ಮೆ ಕಳೆದುಕೊಂಡ ಹ್ಯಾರಿಸ್‌ ರೌಫ್‌, ಕೈಯಲ್ಲಿ 06 -00 ಎಂದು ಬೆರಳು ಮೂಲಕ ಸನ್ನೆ ಮಾಡಿ ವ್ಯಂಗವಾಡಿದ್ರು. ಅದರ್ಥ. ಪಹಲ್ಮಾಮ್‌ ಪ್ರತೀಕಾರದ ದಾಳಿಯಲ್ಲಿ ಆಪರೇಷನ್‌ ಸಿಂಧೂರ್‌ ಆಪರೇಷನ್‌ನಲ್ಲಿ ಪಾಕ್‌ ಭಾರತದ ಆರು ಫೈಟರ್‌ ಜೆಟ್‌ಗಳನ್ನು ಹೊಡೆದು ಉರುಳಿಸಿದೆ ಎಂದು ಸಮರ್ಥಿಸಿಕೊಳ್ತಿದೆ.

ಆದ್ರೆ, ಭಾರತ ಒಂದನ್ನು ಹೊಡೆದಿಲ್ಲ ಎಂದು ವ್ಯಂಗವಾಡೋ ಮೂಲಕ ಕ್ರಿಕೆಟ್‌ ಆಟಗಾರರು ಈ ಸುಳ್ಳು ಸುದ್ದಿಯನ್ನು ಸಮರ್ಥಿಸಿಕೊಳ್ತಿದ್ದಾರೆ. ಇನ್ನು ಇತ್ತೀಚೆಗೆ ಪಾಕ್‌ ಮಹಿಳಾ ಕ್ರಿಕೆಟರ್‌ ಸಿದ್ರಾ ಅಮೀನ್‌ ಕೂಡ ಇದೇ ಸಿಗ್ನಲ್‌ ಮಾಡಿದ್ರು. ಅದೇನೆ ಇರಲಿ, ಫ್ಯಾನ್ಸ್‌ ಇದಕ್ಕೆ ತಕ್ಕ ಉತ್ತರ ಕೊಡ್ತಾ ಇದ್ದಾರೆ, ಪಿಚ್‌ನಲ್ಲಿ ಇಂಡಿಯಾ ಬ್ಯಾಟರ್‌ಗಳು ತಕ್ಕ ಶಾಸ್ತಿ ಮಾಡ್ತಿದ್ರು.

ಇನ್ನು ಶುಭಮನ್ ಗಿಲ್ ಕೂಡ ಮಾತಿನ ಮೂಲಕ ತಿರುಗೇಟು ನೀಡಿ ಅಭಿಮಾನಗಳ ಹೃದಯ ಗೆದ್ದರು. ಸ್ಲೆಡ್ಜಿಂಗ್ ಮಾಡುತ್ತಿದ್ದ ಹ್ಯಾರಿಸ್ ರೌಫ್ ಎಸೆತದಲ್ಲಿ ಬೌಂಡರಿ ಸಿಡಿಸಿ ನೇರವಾಗಿ ರೌಫ್ ಬಳಿ ಬಂದು ಹೋಗಿ ಬಾಲ್ ಹೆಕ್ಕಿ ತೆಗೆದುಕೊಂಡು ಬಾ ಎಂದ್ರು. ಒಂದು ಹಂತದಲ್ಲಿ ರೌಫ್‌ ಮತ್ತು ಅಭಿಷೇಕ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಂಪೈರ್‌ ಮಧ್ಯಪ್ರವೇಶಿಸಿ ಉಭಯ ಆಟಗಾರರನ್ನು ಸಮಾಧಾನ ಪಡಿಸಿದರು. ಇಲ್ಲಿಗೆ ಸುಮ್ಮನಾಗದ ಭಾರತೀಯ ಬ್ಯಾಟರ್‌ಗಳು ಪಾಕ್‌ ಬೌಲರ್‌ಗಳಿಗೆ ಸಿಕ್ಸರ್‌ ಮತ್ತು ಬೌಂಡರಿ ಬಾರಿಸುತ್ತ ತಿರುಗೇಟು ನೀಡುತ್ತಿದ್ದರು. ಸ್ಲೆಡ್ಜಿಂಗ್, ಮಾತಿನ ಚಕಮಕಿ, ಸಂಭ್ರಮಾಚರಣೆ ಎಲ್ಲವೂ ರೋಮಾಂಚನಕಾರಿಯಾಗಿತ್ತು.

ಅಲ್ಲದೆ ಹ್ಯಾರೀಸ್‌ ರೌಫ್‌ ಮಾಡಿದ ಇನ್ನೊಂದು ದುರ್ವರ್ತನೆ ಅಂದ್ರೆ, ಗುಜರಾತ್‌ನಲ್ಲಿ ಏರ್‌ ಇಂಡಿಯಾ ವಿಮಾನ ಬೀಳುತ್ತಿರುವುದನ್ನು ತೋರಿಸುವ ಮೂಲಕ ಭಾರತೀಯರನ್ನು ಕೆಣಕಿದ್ದು. ಇದು ಮಾತ್ರ ಎಂತವ್ರನ್ನು ಕೆರಳಿಸೋ ದೃಶ್ಯಗಳು. ಅದೇನೆ ಇರಲಿ ಈ ಎಲ್ಲದಕ್ಕೂ ಇಂಡಿಯಾ ಕ್ಯಾಪ್ಟನ್‌ ಪ್ರೆಸ್‌ ಮೀಟ್‌ನಲ್ಲೇ ತಕ್ಕ ಉತ್ತರ ನೀಡಿದ್ದಾರೆ. ಎದುರಾಳಿ ತಂಡ ಅಂತಾ ಅನೇಕರು ಇಲ್ಲಿವರೆಗೂ ಅಭಿಪ್ರಾಯ ಪಡ್ತಾ ಇದ್ದರು. ಆದ್ರೆ, ಸೂರ್ಯಕುಮಾರ್‌ ಮಾತುಗಳನ್ನು ಕೇಳಿದ್ರೆ, ಇದಕ್ಕಿಂತ ತಕ್ಕ ರಿಯಾಕ್ಷನ್‌ ಇಲ್ಲವೇ ಇಲ್ಲ ಅನಿಸುತ್ತೆ. ಪಾಕಿಸ್ತಾನ ನಮಗೆ ‘ಎದುರಾಳಿಯೇ’ ಅಲ್ಲ ಎನ್ನುವ ಮೂಲಕ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ ಸೂರ್ಯ ಕುಮಾರ್ ಯಾದವ್.

ನೀವೆಲ್ಲಾ ಸಾಂಪ್ರದಾಯಿಕ ಎದುರಾಳಿಗಳನ್ನು ಅನ್ನೋದನ್ನು ಬಿಡಿ. ಭಾರತ ಮತ್ತು ಪಾಕಿಸ್ತಾನವು T20I ಗಳಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಭಾರತ 12 ಬಾರಿ ಗೆದ್ದಿದೆ. ಎದುರಾಳಿ ಅಂದ್ರೆ ಏನು ಅರ್ಥ? ಎರಡು ತಂಡಗಳು 15 ಪಂದ್ಯಗಳನ್ನು ಆಡಿ 8-7 ಗೆದಿದ್ದರೆ ಅದು ಎದುರಾಳಿ. ಇಲ್ಲಿ ಅದು 13-1 (12-3) ಅಥವಾ ಇನ್ನಾವುದೇ ರೀತಿಯಲ್ಲಿ ಗೆದ್ದಿಲ್ಲವಲ್ಲ ಎಂದು ನಗುತ್ತಲೇ ಸೂರ್ಯ ಕುಮಾರ್ ಯಾದವ್ ಹೇಳಿದರು. ಪಾಕಿಸ್ತಾನಕ್ಕಿಂತ ನಾವು ಅತ್ಯುತ್ತಮರು ಅನಿಸುತ್ತದೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ್ರು.

Rakesh arundi

Leave a Reply

Your email address will not be published. Required fields are marked *