Dharmasthala Banglegudda: ಕೊಡಗಿನ ತಾತ ಬಂಗ್ಲೆಗುಡ್ಡದಲ್ಲಿ ಮಣ್ಣಾಗಿದ್ದೇಗೆ.! ಅಚ್ಚರಿ ಟ್ರಾವೆಲ್‌ ಹಿಸ್ಟರಿ

ಧರ್ಮಸ್ಥಳ ಸಾಮೂಹಿಕ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದ್ಕಡೆ ಚಿನ್ನಯ್ಯನ ಹಳೆ ವೀಡಿಯೋಗಳು ಸರಣಿ ರೂಪದಲ್ಲಿ ಟೆಲಿಕಾಸ್ಟ್‌ ಆಗ್ತಾ ಅನೇಕ ಬೆಚ್ಚಿ ಬೀಳಿಸೊ ಸಂಗತಿಗಳನ್ನು ಹಂಚಿಕೊಳ್ತಿದ್ದರೆ, ಇತ್ತ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳ ಸುತ್ತಾ ಎಸ್‌ಐಟಿ ತನಿಖೆ ಶುರು ಮಾಡಿದೆ. ಈ ನಡುವೆ ಬಂಗ್ಲೆಗುಡ್ಡದಲ್ಲಿ ಸಿಕ್ಕಿರೋ ವಾಕಿಂಗ್‌ ಸ್ಟಿಕ್‌ನಾ ಜಾಡು ಹಿಡಿದು ಹೊರಟ ಎಸ್‌ಐಟಿಗೆ ಅಚ್ಚರಿ ಸತ್ಯಗಳು ತನಿಖೆಯಿಂದ ಗೊತ್ತಾಗಿದೆ.ಅಸಲಿಗೆ ಬಂಗ್ಲೆಗುಡ್ಡದಲ್ಲಿ ಸಿಕ್ಕಿರೋ ಐಡಿ ಕಾರ್ಡ್‌ ಹಾಗೂ, ವಾಕಿಂಗ್‌ ಸ್ಟಿಕ್‌ ಆಧಾರದಲ್ಲಿ ವೃದ್ಧ ಯುಬಿ ಅಯ್ಯಪ್ಪ. ಹಾಗೂ ಈ ವ್ಯಕ್ತಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಶೆಟ್ಟಿಗೇರಿ ಗ್ರಾಮದವ್ರು ಅನ್ನೋ ಪ್ರಾಥಮಿಕ ಮಾಹಿತಿಗಳು ಮಾತ್ರ ಗೊತ್ತಿದೆ. ಈಗಾಗ್ಲೇ ಕುಟುಂದವರು ಈ ಐಡಿ ಕಾರ್ಡ್‌ ಹಾಗೂ ಸಿಕ್ಕಿರೋ ವಾಕಿಂಗ್‌ ಸ್ಟಿಕ್‌ನಾ ನನ್ನ ತಂದೆಯೇ ಬಳಸ್ತಾ ಇದ್ದರು. ಇದು ಅವ್ರದ್ದೇ ಹಾಗಾಗಿ ಇಲ್ಲಿ ಸಿಕ್ಕಿರೋ ತಲೆಬುರುಡೆ ನನ್ನ ತಂದೆಯದ್ದೇ ಅನ್ನೋ ನಂಬಿಕೆಗೆ ಬರಲಾಗಿದ್ದರು. ಬೆಂಗಳೂರಿನ ಮಡಿವಾಳ ಎಫ್‌ಎಸ್‌ಎಲ್‌ ಸಂಸ್ಥೆಯಿಂದ ಫೈನಲ್‌ ರಿಪೋರ್ಟ್‌ ಕೂಡ ಬರಬೇಕಿದೆ. ಅದಕ್ಕೆ ಬೇಕಾಗಿರೋ ಡಿಎನ್‌ಎ ಸ್ಯಾಂಪಲ್‌ ಕೂಡ ಈಗಾಗ್ಲೇ ಎಫ್‌ಎಸ್‌ಎಲ್‌ ತಂಡ ಕಲೆ ಹಾಕಿದ

ಮೈಸೂರಿನ ಚಂದ್ರಕಲಾ ಆಸ್ಪತ್ರೆಯಲ್ಲಿ ತಾತ

ಆದ್ರೆ, ಇವತ್ತಿನ ಚರ್ಚೆ ಅದಲ್ಲ. ಸ್ನೇಹಿತರೆ 2017 ರಲ್ಲಿ ಅಯ್ಯಪ್ಪ ನಾಪ್ತೆಯಾಗುವ ಮೊದಲು ಇದೇ ಧರ್ಮಸ್ಥಳಕ್ಕೆ ಆಗಾಗ್ಗೆ ಭೇಟಿ ಕೊಡ್ಥಾ ಇದ್ದರು ಅನ್ನೋ ಮಾಹಿತಿಗಳು ಎಸ್‌ಐಟಿ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದ್ದು, ಇನ್ನಷ್ಟು ತನಿಖೆಗೆ ಈ ಅಂಶಗಳು ಸಹಕಾರಿಯಾಗಲಿದೆ. 2017 ರ ಮೊದಲು ಅಯ್ಯಪ್ಪ ಎನ್ನುವ ವ್ತಕ್ತಿ ಧರ್ಮಸ್ಥಳ ದೇವಸ್ಥಾನಕ್ಕೆ ಭಕ್ತಿಪೂರ್ವಕವಾಗಿ, ಹಾಗೂ ನಂಬಿಕೆಯಿಂದ್ಲೇ ದೇವರ ದರ್ಶನಕ್ಕೆ ಬಂದು ಹೋಗ್ತಾ ಇದ್ದರು. ಆದ್ರೇ ಏಕಾಏಕಿಯಾಗಿ ಬಂಗ್ಲೆಗುಡ್ಡದಲ್ಲಿ ಅನಾಥ ಶವವಾಗಿ ಬಿದ್ದಿದ್ದೇಗೆ. ಅವ್ರ ಮೇಲೆ ಅಂತಹ ಶತ್ರುಗಳಾರಿದ್ರು. ಇಂತಹ ಎತ್ತರದ ಬಂಗ್ಲೆಗುಡ್ಡ ಏರುವಷ್ಟು ಸಾಮಾರ್ಥ್ಯ ಆ ತಾತನಿಗೆ ಬಂದ್ದಿದ್ದೇಗೆ.? ಯಾರಾದ್ರೂ ಬೇರೆಡೆ ಬಿದ್ದಿದ್ದ ಈ ಮೃತದೇಹವನ್ನು ವಾಮಾಚಾರದ ಹೆಸ್ರಲ್ಲಿ ಇಲ್ಲಿಗೆ ತಂದು ಹಾಕಿದ್ರಾ.? ಅಥವಾ ಯಾರಾದ್ರೂ ಈ ಅಯ್ಯಪ್ಪನ ಜೀವ ತೆಗೆದು ಈ ಕೃತ್ಯ ಎಸಗಿದ್ರಾ ಅನ್ನೋ ಅನುಮಾನಗಳು ಮೂಡಿವೆ.

ಅಯ್ಯಪ್ಪನ ಮಗ ಜೀವನ್‌ ಮಾಧ್ಯಮಗಳ ಮುಂದೆ ಹಂಚಿಕೊಂಡಿರೋ ಮಾಹಿತಿಗಳ ಪ್ರಕಾರ, ಅಯ್ಯಪ್ಪ ಕಾಣೆಯಾದ ದಿನ ಹಳ್ಳಿಯಿಂದ ಮೈಸೂರಿಗೆ ಬಸ್‌ ಹತ್ತಿ ಹೊರಟಿದ್ರು. ಬಸ್‌ ಮೊದಲು ಗೋಣಿಕೊಪ್ಪಲಿಗೆ ಹೋಗ್ತಿತ್ತು. ಅಲ್ಲಿ ಇಳಿದು ಮತ್ತೊಂದು ಬಸ್‌ ಏರಿ ಮೈಸೂರು ತಲುಪಬೇಕಿತ್ತು. ಅವ್ರು ಮನೆಯಿಂದ ವಾಕಿಂಗ್‌ ಸ್ಟಿಕ್‌ ತೆಗೆದುಕೊಂಡು ಹೋಗಿದ್ರು. ಆದ್ರೆ ಅದೇಗೆ ಅವ್ರು ಬಂಗ್ಲೆಗುಡ್ಡದಲ್ಲಿ ಪತ್ತೆಯಾದ್ರು ಗೊತ್ತಾಗ್ತಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ. ಅವ್ರು ಪ್ರತಿ ತಿಂಗಳೊಮ್ಮೆ ದೃಷ್ಟಿ ಪರೀಕ್ಷೆಗಾಗಿ ಮೈಸೂರಿನ ಚಂದ್ರಕಲಾ ಆಸ್ಪತ್ರೆಗೆ ಭೇಟಿ ಕೊಡ್ತಾ ಇದ್ದರು. ಅವ್ರಿಗೆ ರಕ್ತದೊತ್ತಡ. ಶುಗರ್‌.. ಹಾಗೂ ಸಣ್ಣದಾಗಿ ದೃಷ್ಠಿ ಸಮಸ್ಯೆಗಳು ಮಾತ್ರ ಇದ್ದವು. ಆದ್ರೆ, ಅದೇಗೆ ನನ್ನ ತಂದೆ ಅಲ್ಲಿ ಶವವಾಗಿ ಪತ್ತೆಯಾದ್ರೂ ಅನ್ನೋದನ್ನು ನಂಬೋಕೆ ಆಗ್ತಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

ಧರ್ಮಸ್ಥಳಕ್ಕೆ ಪದೇ ಪದೇ ತಾತನ ಭೇಟಿ..!

ನನ್ನ ತಂದೆ ಪ್ರತಿ ವರ್ಷಕ್ಕೊಮ್ಮೆ, ಇಲ್ಲವೇ ಎರಡು ಬಾರಿಯಾದ್ರೂ ಧರ್ಮಸ್ಥಳಕ್ಕೆ ಭೇಟಿ ಕೊಡ್ಥಾ ಇದ್ದರು.ಪಾರದರ್ಶಕ ತನಿಖೆಯಿಂದ ಮಾತ್ರ ನನ್ನ ತಂದೆ ಸಾವಿಗೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಲು ಸಾಧ್ಯ. ಈ ಕೃತ್ಯ ಎಸಗಿದ್ದು ಯಾರು..? ಅಥವಾ ನನ್ನ ತಂದೆಯೇ ಅಲ್ಲಿ ಹೋಗಿ ಪ್ರಾಣವನ್ನು ಕಳೆದುಕೊಂಡ್ರಾ.? ಈ ಅಸ್ವಾಭಾವಿಕ ಸಾವಿಗೆ ನೈಜ ಸತ್ಯಾಂಶಗಳನ್ನು ಬಯಲಿಗೆಳೆಯೋ ಕಾರ್ಯ ಎಸ್‌ಐಟಿ ಮೇಲಿದೆ. ಅವ್ರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅದನ್ನು ಕಂಡು ಹಿಡಿಯಬಲ್ಲರು ಎಂದು ನಂಬಿದ್ದೇನೆ ಎಂದಿದ್ದಾರೆ. ನಾನು ನನ್ನ ತಂದೆ ಮಿಸ್‌ ಆದ್ಮೇಲೆ ಲೋಕಲ್‌ ಪೊಲೀಸ್‌ ಸ್ಟೇಷನ್‌ಗೆ ಭೇಟಿ ಕೊಟ್ಟು ದೂರು ನೀಡಿದ್ದೆ. ಆರು ತಿಂಗಳ ಕಾಲ ಹುಡುಕಾಟ ನಡೆಸಲಾಯ್ತು. ಪೊಲೀಸರು ಮೈಸೂರು ಆಸ್ಪತ್ರೆಗೆ ಹೋಗಿ ವಿಚಾರಿಸಿದ್ರು. ಅವ್ರ ಅಲ್ಲಿಗೂ ಹೋಗಿಲ್ಲ. ಅವ್ರು ಆಗಾಗ್ಗೆ ಭೇಟಿ ಕೊಡೋ ಜಾಗಗಳಲ್ಲೂ ವಿಚಾರಿಸಲಾಯ್ತು. ಆದ್ರೆ, ಅದ್ಯಾವುದೂ ಯ್ಯೂಸ್‌ ಆಗಲೇ ಇಲ್ಲ. ಆದ್ರೆ, ಈ ಬುರುಡೆ ರಹಸ್ಯಗಳ ಹಿಂದಿನ ಭಯಾನಕತೆ ಬೆಳಕಿಗೆ ಬರಬೇಕು ಎಂದ್ರು.

ಇನ್ನು ಎಸ್‌ಐಟಿ ಕಾರ್ಯಾಚರಣೆ ತಂಡವು ಗೃಹ ಸಚಿವಾಲಯಕ್ಕೆ ನೀಡಿರೋ ಮಾಹಿತಿಗಳ ಪ್ರಕಾರ, ಚಿನ್ನಯ್ಯ ಆರಂಭದಿಂದ್ಲೇ ಎಸ್‌ಐಟಿ ತಪ್ಪು ಜಾಗಗಳನ್ನು ತೋರಿಸೋ ಮೂಲಕ ಎಸ್‌ಐಟಿಗೆ ಮೋಸ ಮಾಡಿದ್ಧಾನೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ತನಿಖಾ ವರದಿಯೊಂದು ಬಂಗಳೂರು ಪೋಸ್ಟ್‌ ನಲ್ಲಿ ಪಬ್ಲಿಶ್‌ ಆಗಿದ್ದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಉದ್ದೇಶಪೂರ್ವಕವಾಗಿಯೇ ತಪ್ಪು ‍ಸ್ಥಳಗಳನ್ನು ಆರಂಭದಿಂದ್ಲೇ ತೋರಿಸಿದ. ಹಾಗಾಗಿ ನಿರೀಕ್ಷಿತ ಯಶಸ್ಸು ಕಾಣಲು ಅಸಾಧ್ಯವಾಯ್ತು ಎನ್ನುವ ನಿಗೂಢ ಸತ್ಯಗಳು ಬೆಳಕಿಗೆ ಬಂದಿವೆ.

ಜುಲೈ 03 ರಂದು ಸಾಮೂಹಿಕವಾಗಿ ಶವ ಹೂತಿದ್ದೇನೆ ಎಂದು ಕಂಪ್ಲೆಂಟ್‌ ಕೊಟ್ಟಿದ್ದ ಚಿನ್ನಯ್ಯ, ದಾರಿ ತಪ್ಪಿಸೋ ಕೆಲಸ ಮಾಡಿಬಿಟ್ಟ. ಇನ್ನು, ಆರನೇ ಸ್ಥಳದಲ್ಲಿ ಮೃತದೇಹಗಳು ಸಿಕ್ಕಾಗ, ಆತನೇ ಆಶ್ಚರ್ಯ ವ್ಯಕ್ತಪಡಿಸಿದ್ದ. ಇದನ್ನು ನಾನು ಹೂತೆ ಇಲ್ಲ ಎಂದು ಹೇಳಿದ್ದ ಎಂದು ಗೊತ್ತಾಗಿದೆ. 11 ಎ ಎಂಬ ಜಾಗದಲ್ಲಿ ಮೇಲ್ಮೈ ಜಾಗದಲ್ಲೇ ಮೂಳೆಗಳು ಸಿಕ್ಕಿರೋದ್ರಿಂದ ಅದನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಗೆ ಮುನ್ನ ಯಾರಾದರೂ ಚಿನ್ನಯ್ಯ ಅವರನ್ನು ಸಂಪರ್ಕಿಸಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಸೂಚಿಸಿರಬಹುದು ಎಂದು ಮೂಲಗಳು ಸೂಚಿಸಿದ್ದರೂ, ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ದೃಡಪಡಿಸುವ ಪುರಾವೆಗಳು ಎಸ್‌ಐಟಿಗೆ ದೊರಕಿಲ್ಲ. ಏಕಾಂಗಿಯಾಗಿ ದೊಡ್ಡ ತನಿಖಾತಂಡಕ್ಕೆ ಮೋಸ ಮಾಡಿದ, ಸುಳ್ಳು ಹೇಳಿದ ಆರೋಪದಲ್ಲಿ ಜೈಲಿನಲ್ಲಿ ಚಿನ್ನಯ್ಯ ಶಿಕ್ಷೆ ಎದುರಿಸುತ್ತಿದ್ದಾನೆ. ಎಸ್‌ಐಟಿ ಎನ್ನುವ ದೊಡ್ಡ ಟೀಮ್‌ಗೆ ಗಮನಾರ್ಹ ನಷ್ಟವನ್ನು ಉಂಟು ಮಾಡಿದ್ದಾನೆ. ಇನ್ನೊಂದ್ಕಡೆ ಗಮನಾರ್ಹ ಸಂಗತಿ ಎಂದರೆ, ಎಸ್‌ಐಟಿ ಈ ಸತ್ಯಾಂಶಗಳನ್ನು ಬಯಲಿಗೆಳೆಯಲು ಹಗಲಿರುಳು ‍ಶ್ರಮಪಡ್ತಿದೆ. ತನಿಖೆಯನು ನಿಷ್ಪಕ್ಷಪಾತವಾಗಿ ಮಾಡ್ತಿದೆ ಎನ್ನಲಾಗ್ತಿದೆ. ಎಸ್‌ಐಟಿ ಇನ್ನು ಗಿರೀಶ್‌ ಮಟ್ಟ‍ಣ್ಣನವರ್‌, ಮಹೇಶ್‌ ತಿಮರೊಡಿ, ಅಭಿಶೇಕ್‌ , ಸಮೀರ್‌ ಸೇರಿದಂತೆ ಎಲ್ಲರನ್ನು ವಿಚಾರಣೆ ಮಾಡ್ತಿರೋದ್ರಿಂದ ತಪಾಸಣೆ ನ್ಯಾಯಯುತವಾಗಿದೆ ಎನ್ನಬಹುದು. ಇನ್ನು ತನಿಖೆಯ ಬಗ್ಗೆ ಗಿರೀಶ್‌ ಮಟ್ಟಣ್ಣನವರ್‌ ಕಾನ್ಫಿಡೆಂಟ್‌ ಆಗಿ ಆತ್ಮವಿಶ್ವಾಸದಿಂದ್ಲೇ ಮಾತನಾಡ್ತಿರೋದ್ರಿಂದ ತನಿಖೆ ದಿಕ್ಕು ತಪ್ಪಿಲ್ಲ ಅನ್ನೋದನ್ನು ನಂಬಬಹುದು.

Rakesh arundi

Leave a Reply

Your email address will not be published. Required fields are marked *