Ig Nobel Prize: ಇದು ವಿಚಿತ್ರ ಸಂಶೋಧನೆಯ ನೊಬೆಲ್
ಜಪಾನ್‌ನ ಸಂಶೋಧಕರ ತಂಡವೊಂದು, ದನದ ಮೇಲೆ ಝೀಬ್ರಾದ ಹಾಗೆ ಪಟ್ಟಿಗಳನ್ನು ಹಾಕಿದರೆ ಅದರ ಮೇಲೆ ನೊಣಗಳು ಕೂರುವುದು ಕಡಿಮೆಯಾಗುತ್ತದೆ ಎಂದು ಪತ್ತೆ ಹಚ್ಚಿದೆ. ಈ ಅದ್ಭುತ ಸಂಶೋಧನೆಗೆ ಈ ವರ್ಷದ ‘ಇಗ್ ನೊಬೆಲ್’ ಸಿಕ್ಕಿದೆ.
ಹೆಸರಿನಲ್ಲಿ ನೊಬೆಲ್ ಇದೆಯೆಂದಾಕ್ಷಣ ಇದು ಆ ನೊಬೆಲ್ ಪ್ರಶಸ್ತಿ ಅಲ್ಲ, ಇದು ಜಗತ್ತಿನಲ್ಲಿ ನಡೆಯುವ ವಿಲಕ್ಷಣ ಸಂಶೋಧನೆಗಳಿಗೆ ಕೊಡುವ ಪ್ರಶಸ್ತಿ. ಇಗ್ ನೊಬೆಲ್ ನಲ್ಲಿ ಭಾರತದ ಸಾಧನೆ ದೊಡ್ಡದು. ಈವರೆಗೆ 22 ಮಂದಿ ಇಗ್‌ನೊಬೆಲ್ ಗೆದ್ದಿದ್ದಾರೆ. ಈ ಬಾರಿ, ಸಾಕ್ಸ್ ಗಳು ವಾಸನೆ ಬರುವುದನ್ನು ತಡೆಯಲು ಯುವಿ ಲ್ಯಾಂಪ್ ಇರುವ ರ‍್ಯಾಂಕ್ ತಯಾರಿಸಿದ್ದಕ್ಕೆ ಶಿವ ನಾಡರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ವಿಕಾಸ್ ಕುಮಾರ್ ಮತ್ತು ಅವರ ವಿದ್ಯಾರ್ಥಿ ಸಂಶೋಧಕ ಸಾರ್ಥಕ್ ಮಿತ್ತಲ್‌ಗೆ ಇಗ್ ನೊಬೆಲ್ ಸಿಕ್ಕಿದೆ.
ಜರ್ಮನ್ ಮನಃಶಾಸ್ತ್ರಜ್ಞರೊಬ್ಬರು ಆಲ್ಕೋಹಾಲ್ ಜನರು ವಿದೇಶಿ ಭಾಷೆಯನ್ನು ಉತ್ತಮವಾಗಿ ಮಾತನಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿರುವುದು ಕೂಡ ಈ ಬಾರಿಯ ಇಗ್‌ನೊಬೆಲ್‌ನ ಹೈಲೆಟ್ಸ್ ಸೆಪ್ಟೆಂಬರ್ 18ರ ರಾತ್ರಿ ಬೋಸ್ಟನ್ ಯೂನಿವರ್ಸಿಟಿಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.