Ganesh idol Woman: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಮಹಿಳೆ ಬಂಧನ

ಹಾಸನ ಜಿಲ್ಲೆ ಬೇಲೂರಿನ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾಕಿ ವಿವಾದ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರದ ಉಂಡೆದಾಸರಹಳ್ಳಿಯ ನಿವಾಸಿಯ ಮಹಿಳೆಯನ್ನು ಬೇಲೂರು ಪೊಲೀಸರು ವಶಕ್ಕೆದ್ದಾರೆ.

ಮುಸುಕುಧಾರಿ ಮಹಿಳೆಯೊಬ್ಬರು ಬೇಲೂರು ವಿನಾಯಕ ದೇವಾಲಯದ ಒಳಕ್ಕೆ ಚಪ್ಪಲಿ ಧರಿಸಿ ಭೇಟಿ ನೀಡಿ, ಅಲ್ಲಿನ ಗಣಪತಿ ವಿಗ್ರಹಕ್ಕೆ ಚಪ್ಪಲಿಯನ್ನು ಹಾಕಿ ಅಪಮಾನ ಮಾಡಿದ್ದರು. ಈ ಕೃತ್ಯವನ್ನು ಗಮನಿಸಿದ ದೇವಾಲಯದ ಭಕ್ತರು ಮತ್ತು ಸಿಬ್ಬಂದಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ದೃಶ್ಯಗಳು ದೇವಾಲಯದ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾದ ಮುಸುಕುಧಾರಿ ಮಹಿಳೆಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಆಕೆ ಚಿಕ್ಕಮಗಳೂರಿನ ಉಂಡೆದಾಸರಹಳ್ಳಿಯ ನಿವಾಸಿ ಎಂಬುದನ್ನು ಪತ್ತೆಹಚ್ಚಿದ್ದಾರೆ. ನಂತರ, ಚಿಕ್ಕಮಗಳೂರು ಡಿವೈಎಸ್‌ಪಿ ಅವರ ನೇತೃತ್ವದಲ್ಲಿ ನಗರ ಪೊಲೀಸರು ಮತ್ತು ಬಸವನಹಳ್ಳಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

Rakesh arundi

Leave a Reply

Your email address will not be published. Required fields are marked *