Chikkamangalore Selfie Incident: ಸೆಲ್ಫಿ ಹುಚ್ಚಾಟಕ್ಕೂ ಮುನ್ನ ಎಚ್ಚರ, ಸೆಲ್ಫಿಗಾಗಿ ಪ್ರಾಣವನ್ನೇ ಬಿಟ್ಟಿ ಶಿಕ್ಷಕ!
ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ವೀವ್ಸ್, ಲೈಕ್ಸ್ ಪಡೆದುಕೊಳ್ಳಲು ನೀವು ತೋರಿಸುವ ಹುಚ್ಚಾಟ ನಿಮ್ಮ ಪ್ರಾಣವನ್ನೇ ಬಲಿ ತೆಗೆದುಕೊಳ್ಳಬಹುದು. ಸೆಲ್ಫಿ ಪ್ರಿಯರ ಹುಚ್ಚಾಟದಿಂದ ಅಮೂಲ್ಯವಾದ ಪ್ರಾಣವನ್ನೇ ಕಳೆದುಕೊಂಡ ದುರಂತ ಘಟನೆ ಇದು. ದಸರ ರಜೆ ಹಿನ್ನೆಲೆ ಚಿಕ್ಕಮಂಗಳೂರಿನ ಪ್ರಖ್ಯಾತ ಟೂರಿಸಂ ಸ್ಪಾಟ್, ಮನಮೋಹಕ ಪ್ರಕೃತಿಯ ತಾಣವಾದ ಕೆಮ್ಮಣ್ಣುಗುಂಡಿಗೆ ತೆರಳಿದ್ದ ಶಿಕ್ಷಕ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ತೆತ್ತಿದ್ದಾರೆ.
ಶಿಕ್ಷಕ ಸಂತೋಷ್ ಹಾಗೂ ಪತ್ನಿ ವೀವ್ಪಾಯಿಂಟ್ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾಗ ಪ್ರಪಾತಕ್ಕೆ ಬಿದ್ದು ಮೃತ ಪಟ್ಟ ಘಟನೆ ನಡೆದಿದ್ದು, ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಐದು ವರ್ಷದ ಹಿಂದೆ ಮದ್ವೆಯಾಗಿದ್ದ ಸಂತೋಷ್ ಹಾಗೂ ಶ್ವೇತ ಶಿವಮೊಗ್ಗ ಮೂಲದವ್ರಾಗಿದ್ದು, ಚಿಕ್ಕಮಂಗಳೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ರು.
ಬಂಡೆ ಮೇಲೆ ಬಿದ್ದ ಕಾರಣ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿ ಸಂತೋಷ್ಗೆ 40 ವರ್ಷ ವಯಸ್ಸಾಗಿತ್ತು. ಆದ್ರೆ ಸೆಲ್ಫಿ ಹುಚ್ಚು ಅವ್ರ ಸಂತೋಷವನ್ನೇ ಕಿತ್ತುಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಲಿಂಗದಹಳ್ಳಿಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮದ ಸಂತೋಷ್ ಮತ್ತು ಶ್ವೇತಾ 5 ವರ್ಷಗಳ ಹಿಂದೆ ಮದ್ವೆಯಾಗಿದ್ರು. ಸಂತೋಷ್ ಚಿಕ್ಕಮಂಗಳೂರಿನ ತರೀಕೆರೆ ತಾಲ್ಲೂಕಿನ ಲಕ್ಷ್ಮಿಸಾಗರ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ರು. ದಸರೆ ರಜೆಗೆಂದೂ ಕೆಮ್ಮಣ್ಣುಗುಂಡಿಗೆ ಹೋಗಿದ್ದ ಜೋಡಿಗೆ ಇಂತದ್ದೊಂದು ಆಘಾತ ಎದುರಾಗಿದೆ.
ಪ್ರಪಾತದ ತುದಿಯಲ್ಲಿ ಸೆಲ್ಪೀ ತೆಗೆದುಕೊಳ್ಳಲು ಮುಂದಾಗಿದ್ದ ಸಂತೋಷ್ 100 ಅಡಿ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವ್ರ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಅವ್ರನ್ನು ಹಗ್ಗದ ಸಹಾಯದಿಂದ ಮೇಲೆಕ್ಕೇತ್ತಿದೆ. ಕ್ಷಣಿಕ ತೃಪ್ತಿ ನೀಡುವ ಈ ಫೋಟೋ ಹುಚ್ಚಾಟಕ್ಕೆ ಸಿಲುಕಿ ನಿಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳಬೇಡಿ.