Lovers kiss video viral : ಬಸ್‌ ಸ್ಟ್ಯಾಂಡ್‌ನಲ್ಲೇ ಪ್ರೇಮಿಗಳು ಲಿಪ್‌ ಟು ಲಿಪ್‌ ಕಿಸ್‌..!


ಕೇಡು ಕಲಿಗಾಲ ಕೆಟ್ಟೋಯ್ತು ಅನ್ನೋ ಮಾತು ಸುಳ್ಳಲ್ಲ. ಇಂದಿನ ಜೆನ್‌ಝಡ್‌ ಯುವಕ ಯುವತಿಯರಿಗೆ ಮಡಿವಂತಿಕೆ, ಎಲ್ಲಿ ಹೇಗೆ ವರ್ತಿಸಬೇಕು ಅನ್ನೋ ಸಾಮಾನ್ಯ ಸೆನ್ಸ್‌ ಕೂಡ ಇಲ್ಲ. ತಂದೆ ತಾಯಿ ಸಮಾನ ಹಿರಿಯರು ನಮ್ಮನ್ನು ಗಮನಿಸ್ತಾರೆ ಅನ್ನೋ ಭಯವೂ ಕೂಡ ಇಲ್ಲ. ಅದಕ್ಕೆ ಈ ಘಟನೆಯೇ ಸಾಕ್ಷಿ. ಪ್ರಣಯ ಪ್ರೇಮಿಗಳು ಹಾಡುಹಗಲೇ ಬಸ್‌ಸ್ಟ್ಯಾಂಡ್‌ನಲ್ಲಿ ಚುಂಬಿಸ್ತಿರೋ ವೀಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಿಸ್ಸಿಂಗ್‌ ಸ್ಟಾರ್‌ ಹುಚ್ಚಾಟಕ್ಕೆ ಕಲರ್‌ಫುಲ್‌ ಕಮೆಂಟ್ಸ್‌
ಈ ಕಿಸ್ಸಿಂಗ್‌ ಪ್ರೇಮಿಗಳ ಹುಚ್ಚಾಟಕ್ಕೆ ಸಮಾಜದಲ್ಲಿ ವಿರೋಧ ಕೂಡ ಕೇಳಿ ಬರ್ತಿದೆ. ರೈಲು, ಕಾರು, ಬಸ್ಸು, ಪಾರ್ಕ್‌ ಅಂತಾನೂ ನೋಡದೇ ಪಬ್ಲಿಕ್‌ನಲ್ಲೇ ಕಿಸ್ಸಿಂಗ್‌ ಸ್ಟಾರ್‌ಗಳ ರೀತಿಯಲ್ಲಿ ರೊಮ್ಯಾನ್ಸ್‌ ಮಾಡೋ ಈ ಯುವ ಪ್ರೇಮಿಗಳ ಸಂಸ್ಕಾರ, ಸಂಸ್ಕೃತಿ ಕಂಡಾಗ ಮುಜುಗರವಾಗುತ್ತದೆ. @divyakumari ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವೀಡಿಯೋ ಶೇರ್‌ ಆಗಿದ್ದು ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ.

ಸೆಪ್ಟೆಂಬರ್‌ 18 ರಂದು ಈ ವೀಡಿಯೋ ಶೇರ್‌ ಮಾಡಲಾಗಿದ್ದು, ಬಸ್‌ಗಾಗಿ ಕಾಯ್ತಿದ್ದ ಜನರ ಮುಂದೇ ಈ ರೀತಿಯ ಕಾಮದಾಟ ತೋರಿದ್ದಾರೆ. ಬಿಳಿ ಬಣ್ಣದ ಸ್ಯಾರಿಯುಟ್ಟ ಯುವತಿಗೆ ಪ್ರಿಯಕರ ಕೆನ್ನೆಗೆ ಕಿಸ್‌ ಮಾಡಲು ಮುಂದಾಗುತ್ತಾನೆ. ಆರಂಭದಲ್ಲಿ ರಿಜೆಕ್ಟ್‌ ಮಾಡಿದ್ರೂ ಕೂಡ ಕೊನೆಗೆ ಅವಳು ಸಮ್ಮತಿ ಸೂಚಿಸಿದ್ದಾಳೆ. ಫಾರಿನ್‌ ಕಲ್ಚರ್‌ ಪ್ರಭಾವ ಎಂದು ಅನೇಕರು ಕಮೆಂಟ್ಸ್‌ ಮಾಡಿದ್ದಾರೆ.

Rakesh arundi

Leave a Reply

Your email address will not be published. Required fields are marked *