Karnataka Caste Census: ಜಾತಿಗಣತಿಗೆ ಕ್ಷಣಗಣನೆ, ನಾಳೆಯಿಂದ ಸಮೀಕ್ಷೆ; ಈಕೆಳಗಿನ 60 ಪ್ರಶ್ನೆಗೆ ಉತ್ತರ ಕೊಡಿ ಸಾಕು.!

ನಾಳೆಯಿಂದ್ಲೇ ಇಡೀ ಕರ್ನಾಟಕದಾದ್ಯಂತ ಜಾತಿ ಸಮೀಕ್ಷೆ ಶುರುವಾಗ್ತಿದೆ. ಹಲವು ವಾದ ವಿವಾದ, ವಿರೋಧಗಳ ನಡುವೆ ಜಾತಿ ಸಮೀಕ್ಷೆ ನಡೀತಾ ಇದೆ. ಈಗಾಗ್ಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಸಮೀಕ್ಷೆಯ ನಿಮಯದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗ್ತಿದೆ.

ಇತ್ತ ಅನೇಕ ಸಮುದಾಯಗಳು ಜಾತಿ ಹಾಗೂ ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಅನ್ನೋ ಗೊಂದಲದಲ್ಲಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸ್ವಾಮಿಜಿಗಳು, ನಾಯಕರು, ಮುಖಂಡರು ಭಿನ್ನ ನಿಲುವು ಹೊಂದಿದ್ದು ಇನ್ನು, ಗೊಂದಲದಲ್ಲೇ ಉಳಿದೆ.

ಸದ್ಯ, ಕ್ರಿಶ್ಚಿಯನ್‌ ಧರ್ಮದ ಜೊತೆ ಹಿಂದೂ ಜಾತಿಗಳನ್ನು ಟ್ಯಾಗ್‌ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೆರಳಿ ಕೆಂಡಕಾರಿದ್ರು. ಆದ್ದರಿಂದ ಆ ಕಾಲಂ ಅನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಒಟ್ಟಾರೆಯಾಗಿ ಜಾತಿ ಸಮೀಕ್ಷೆ ಪಟ್ಟಿಯಲ್ಲಿ 60 ಪ್ರಶ್ನೆಗಳನ್ನು ಸಿದ್ದ ಪಡಿಸಲಾಗಿದ್ದು, ಎಲ್ಲಾ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರ ಕೊಡಬೇಕಿದೆ.

ಸಮೀಕ್ಷೆಗೆ ಬೇಕಾಗುವ ದಾಖಲಾತಿಗಳು
1.ರೇಷನ್ ಕಾರ್ಡ್.
2.ಮನೆಯಲ್ಲಿ ಇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
3.ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
4.ಎಲೆಕ್ಷನ್ ಐಡಿ ಕಾರ್ಡ್

  • ಜಾತಿಗಣತಿಯ ಪ್ರಶ್ನೆಗಳು
  • ಮನೆಯ ಮುಖ್ಯಸ್ಥರ ಹೆಸರು
  • ತಂದೆಯ ಹೆಸರು
  • ತಾಯಿಯ ಹೆಸರು
  • ಕುಟುಂಬದ ಕುಲಹೆಸರು
  • ಮನೆ ವಿಳಾಸ
  • ಮೊಬೈಲ್ ಸಂಖ್ಯೆ
  • ರೇಷನ್ ಕಾರ್ಡ್ ಸಂಖ್ಯೆ
  • ಆಧಾರ್ ಸಂಖ್ಯೆ
  • ಮತದಾರರ ಗುರುತಿನ ಚೀಟಿ ಸಂಖ್ಯೆ
  • ಕುಟುಂಬದ ಒಟ್ಟು ಸದಸ್ಯರು
  • ಧರ್ಮ
  • ಜಾತಿ / ಉಪಜಾತಿ
  • ಜಾತಿ ವರ್ಗ (SC/ST/OBC/General/Other)
  • ಜಾತಿ ಪ್ರಮಾಣ ಪತ್ರ ಇದೆಯೇ
  • ಪ್ರಮಾಣ ಪತ್ರ ಸಂಖ್ಯೆ
  • ಜನ್ಮ ದಿನಾಂಕ
  • ವಯಸ್ಸು
  • ಲಿಂಗ (ಪುರುಷ/ಸ್ತ್ರೀ/ಇತರೆ)
  • ವೈವಾಹಿಕ ಸ್ಥಿತಿ
  • ಜನ್ಮ ಸ್ಥಳ
  • ವಿದ್ಯಾಭ್ಯಾಸದ ಮಟ್ಟ
  • ಮನೆಯಲ್ಲಿ ಓದಲು ಬಲ್ಲವರು ಎಷ್ಟು?
  • ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?
  • ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
  • ಮನೆಯಲ್ಲಿ ಶಾಲೆ ಬಿಟ್ಟವರು ಇದ್ದಾರೆಯೇ?
  • ಮನೆಯ ಮುಖ್ಯ ಉದ್ಯೋಗ
  • ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?
  • ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
  • ನಿರುದ್ಯೋಗಿಗಳು ಇದ್ದಾರೆಯೇ?
  • ದಿನದ ಆದಾಯ
  • ತಿಂಗಳ ಆದಾಯ
  • ತಿಂಗಳ ಖರ್ಚು
  • ಸಾಲ ಇದೆಯೇ?
  • BPL ಕಾರ್ಡ್ ಇದೆಯೇ?
  • ಪಿಂಚಣಿ ಪಡೆಯುತ್ತೀರಾ?
  • ಒಟ್ಟು ಜಮೀನು
  • ಕೃಷಿ/ನಿವಾಸಿ ಜಮೀನು?
  • ಮನೆ ಸ್ವಂತದ್ದೇ/ಬಾಡಿಗೆ?
  • ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
  • ವಿದ್ಯುತ್ ಸಂಪರ್ಕ ಇದೆಯೇ?
  • ಕುಡಿಯುವ ನೀರಿನ ಮೂಲ
  • ಶೌಚಾಲಯ ಇದೆಯೇ?
  • ಮನೆಯಲ್ಲಿ ಎಷ್ಟು ಕೊಠಡಿಗಳು?
  • ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?
  • ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?
  • ರೇಷನ್ ಸಬ್ಸಿಡಿ ಸಿಗುತ್ತಿದೆಯೇ?
  • ವಸತಿ ಯೋಜನೆ ಲಾಭ ಪಡೆದಿದ್ದೀರಾ?
  • ವಿದ್ಯಾರ್ಥಿವೇತನ ಪಡೆದಿದ್ದೀರಾ?
  • ಮೀಸಲಾತಿ ಲಾಭ ಪಡೆದಿದ್ದೀರಾ?
  • ಆರೋಗ್ಯ ಯೋಜನೆ ಲಾಭ ಇದೆಯೇ?
  • ಮನೆಯಲ್ಲಿ ವಿಧವೆ ಇದ್ದಾರೆಯೇ?
  • ಅಂಗವಿಕಲರು ಇದ್ದಾರೆಯೇ?
  • ಹಿರಿಯ ನಾಗರಿಕರು (60+) ಇದ್ದಾರೆಯೇ?
  • ಆರು ವರ್ಷದೊಳಗಿನ ಮಕ್ಕಳು ಎಷ್ಟು?
  • ಯುವಕರು (18-35) ಎಷ್ಟು?
  • ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?
  • ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?
  • ಮತದಾನ ಮಾಡುವವರೇ?
  • ಜಾತಿ ಆಧಾರದ ಮೇಲೆ ಬೇದಭಾವ ಅನುಭವಿಸಿದ್ದೀರಾ?
  • ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?

ಸೋಮವಾರದಿಂದ ಶುರುವಾಗುವ ಜಾತಿ ಸಮೀಕ್ಷೆಗೆ ಈ ಎಲ್ಲಾ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರ ನೀಡಲು ಸಜ್ಜಾಗಿ.

Rakesh arundi

Leave a Reply

Your email address will not be published. Required fields are marked *