Navaratri Rajinikanth idol: ನವರಾತ್ರಿ ಹಬ್ಬದಲ್ಲಿ ರಜನಿಕಾಂತ್‌ ಮೂರ್ತಿಗೆ ವಿಶೇಷ ಪೂಜೆ

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ದೇವತೆಗಳ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಗೊಂಬೆ ಕುರಿಸೊದು ಸಹಜ. ಆದರೆ ಅಭಿಮಾನಿಯೊಬ್ಬರು ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಮೂರ್ತಿಗಳನ್ನಿಟ್ಟು ನವರಾತ್ರಿ ಪೂಜೆ ಸಲ್ಲಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಸಿನಿಮಾ ಕಲಾವಿದರನ್ನು ದೇವರ ರೀತಿ ಆರಾಧಿಸುವ ಅಭಿಮಾನಿಗಳು ಸಾಕಷ್ಟು ಮಂದಿ ಇದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಲುವಾಗಿ ಅಭಿಮಾನಿಯೊಬ್ಬರು ಮಧುರೈನಲ್ಲಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಆ ದೇವಸ್ಥಾನದಲ್ಲಿ ರಜನಿಕಾಂತ್ ಫೋಟೋ ಹಾಗೂ ಮೂರ್ತಿಗೆ ಪೂಜೆ ಮಾಡುವ ಮೂಲಕ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ.

ಕಾಲಿವುಡ್ ನಟ ರಜನಿಕಾಂತ್ ಅವರು ತಾಮಿಳುನಾಡು ಮಾತ್ರವಲ್ಲದೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೇ ಅವರನ್ನು ದೇವರಂತೆ ಕಾಣುವ ಅಭಿಮಾನಿಗಳು ಕೂಡ ಇದ್ದಾರೆ. ಅದಕ್ಕೆ ಹಲವು ಉದಾಹರಣೆಗಳಿವೆ. ರಜನಿಕಾಂತ್ ಹೆಸರಲ್ಲಿ ದೇವಸ್ಥಾನಗಳನ್ನು ಕಟ್ಟಿದವರು ಇದ್ದಾರೆ. ಇಲ್ಲೋರ್ವ ಕಟ್ಟಾ ಅಭಿಮಾನಿ ತನ್ನ ಮನೆಯಲ್ಲಿ ದೇವಸ್ಥಾನ ಕಟ್ಟಿ ರಜನಿಕಾಂತ್ ಮೂರ್ತಿಯನ್ನೇ ಇಟ್ಟು ನವರಾತ್ರಿ ಆಚರಿಸುತ್ತಿದ್ದಾರೆ. ನಿಜವಾಗಿಯೂ ದೇವರಿಗೆ ಪೂಜೆ ಮಾಡುವ ರೀತಿಯಲ್ಲೇ ರಜನಿಕಾಂತ್​ ಮೂರ್ತಿಗೆ ಪೂಜೆ, ಆರತಿ ಮಾಡುತ್ತಿರುವ ಈ ಅಭಿಮಾನಿಯ ವಿಡಿಯೋ ವೈರಲ್ ಆಗಿದೆ.

ನವರಾತ್ರಿಯ ಎಲ್ಲ ದಿನಗಳಲ್ಲೂ ರಜನಿಕಾಂತ್ ಅವರ ಫೋಟೋಗಳ ಜೊತೆಗೆ ಪೋಸ್ಟರ್​​ಗಳು ಹಾಗೂ ಮೂರ್ತಿಗಳಿಗೆ ಪೂಜೆ ಮಾಡಲಾಗುತ್ತಿದೆ. ಅಂದಹಾಗೆ ಈ ಅಭಿಮಾನಿ ಕಾರ್ತಿಕ್ ಇರುವುದು ತಮಿಳುನಾಡಿನ ಮಧುರೈನಲ್ಲಿ. ರಜನಿಕಾಂತ್ ಮೂರ್ತಿ ಹಾಗೂ ಫೋಟೋಗಳಿಗೆ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ವರ್ಷದ ನವರಾತ್ರಿ ಆಚರಣೆಯ ಅಂಗವಾಗಿ, ನಾವು ರಜನಿ ದೇವಸ್ಥಾನದಲ್ಲಿ ವಿಶೇಷ ಮೂರ್ತಿಯನ್ನು ಸ್ಥಾಪಿಸಿದ್ದೇವೆ. ವಿಶೇಷ ಮೂರ್ತಿಗಳನ್ನು 15 ಹಂತಗಳಲ್ಲಿ ಜೋಡಿಸಲಾಗಿದೆ. ಮೊದಲ 10 ಹಂತಗಳಲ್ಲಿ ತಲೈವರ್‌ ರಜನಿಕಾಂತ್‌ ಅವರ ಅತ್ಯುತ್ತಮ ಛಾಯಾಚಿತ್ರಗಳಿವೆ. ರಜನಿಕಾಂತ್‌ ಅವರನ್ನ ನಾವು ದೇವರಂತೆ ಭಾವಿಸುತ್ತೇವೆ, ಅದಕ್ಕಾಗಿಯೇ ನಾವು ಅವರನ್ನ ಶಿವ ಮತ್ತು ಕೃಷ್ಣ ಪಾತ್ರಗಳಲ್ಲಿ ಚಿತ್ರಿಸುವ ಗೊಂಬೆಗಳನ್ನ ಇರಿಸಿದ್ದೇವೆ ಎಂದಿದ್ದಾರೆ ಕಾರ್ತಿಕ್. ತಮ್ಮ ಪಾಲಿಗೆ ರಜನಿಕಾಂತ್ ಅವರೇ ದೈವ ಎಂದು ಅಭಿಮಾನಿ ಹೇಳಿದ್ದಾರೆ.

Rakesh arundi

Leave a Reply

Your email address will not be published. Required fields are marked *