Husband,wife: ಕೋರ್ಟ್ ಗೆ ಬಂದ ಪತ್ನಿಗೆ  ಚಾಕು ಇರಿದ ಪತಿ

ಗಂಡ ಹೆಂಡತಿ ಜಗಳ ಉಂಡು ಮಲಗೊವರೆಗೆ ಅಂತಾರೆ. ಅದರೆ ಇಲ್ಲಿ ಕೊಲ್ಲೊವರೆಗು ಹೋಗಿದೆ. ವಿಚ್ಛೇದನ ಅರ್ಜಿ ವಿಚಾರಣೆಗೆಂದು ನ್ಯಾಯಾಲಯಕ್ಕೆ ಆಗಮಿಸಿದ್ದ ಪತ್ನಿ ಮೇಲೆ ಪತಿ ಚಾಕು ಇರಿದ ಘಟನೆ ಶನಿವಾರ ದಾವಣಗೆರೆಯಲ್ಲಿ ನಡೆದಿದೆ. 

ಗಂಡ ಹೆಂಡತಿ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಜಗಳಕ್ಕೆ ಅಂತ್ಯ ಹಾಡಲು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಕೋರ್ಟ್‌ ಸೂಚನೆಯಂತೆ ಅರ್ಜಿ ವಿಚಾರಣೆಗೆಂದು ಇಬ್ಬರು ಆಗಮಿಸಿದ್ದರು. ಪತ್ನಿ ಕೋರ್ಟ್ ಹಾಲ್ ಒಳಗೆ ಬರುತ್ತಿದ್ದಂತೆ ಪತಿ ಚಾಕುಯಿಂದ ಇರಿದಿದ್ದಾನೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ.

ಗಾಯಾಳು ಮಹಿಳೆ ಪದ್ಮಾವತಿ , ಪತಿ ಪ್ರವೀಣ್ ಕುಮಾರ್‌ನಿಂದ ವಿಚ್ಚೇದನ ಬಯಸಿದ್ದರು. ಅಲ್ಲದೆ ಪದ್ಮಾವತಿ ಪತಿ ಪ್ರವೀಣ್ ಕುಮಾರ್‌ನಿಂದ ದೂರಾಗಿ ತಾಯಿ ಮನೆ ಸೇರಿದ್ದರು. ಹೀಗಾಗಿ ವಿಚ್ಚೇದನ ಅರ್ಜಿ ವಿಚಾರಣೆ ದಾವಣೆಗೆರೆ ಕೋರ್ಟ್‌ನಲ್ಲಿ ದಾಖಲಾಗಿತ್ತು. ಕೋರ್ಟ್ ಸೂಚನೆಯಂತೆ ಅರ್ಜಿ ವಿಚಾರಣೆಗೆ ಪತಿ ಪ್ರವೀಣ್ ಕುಮಾರ್ ಹಾಗೂ ಪತ್ನಿ ಪದ್ಮಾವತಿ ಆಗಮಿಸಿದ್ದರು. ಮೊದಲೇ ಪ್ಲಾನ್ ಮಾಡಿದ್ದ ಪ್ರವೀಣ್ ಕುಮಾರ್ ಚಾಕು ತೆಗೆದುಕೊಂಡು ಕೋರ್ಟ್ ಹಾಲ್‌ಗೆ ಆಗಮಿಸಿದ್ದ. ಪದ್ಮಾವತಿ ಕೋರ್ಟ್ ಹಾಲ್ ಪ್ರವೇಶಿಸಿದ ಬೆನ್ನಲ್ಲೇ ಅರ್ಜಿ ವಿಚಾರಣೆ ಆರಂಭಗೊಂಡಿತ್ತು. ಆದರೆ ಈ ಕ್ಷಣದಲ್ಲಿ ಪ್ರವೀಣ್ ಕುಮಾರ್, ಪದ್ಮಾವತಿಗೆ ಚಾಕುವಿನಿಂದ ಇರಿದಿದ್ದಾನೆ.

ಪ್ರವೀಣ್ ಕುಮಾರ್ , ಪದ್ಮಾವತಿ ಮೇಲೆ ದಾಳಿ ಮಾಡುತ್ತಿದ್ದಂತೆ ಪೊಲೀಸರು ಸೇರಿದಂತೆ ಇತರ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರವೀಣ್ ಕುಮಾರ್ ನನ್ನು ಹಿಡಿದು ಪೊಲೀಸರು ಚಾಕು ಕಸಿದುಕೊಂಡಿದ್ದಾರೆ. ಬಳಿಕ ಪ್ರವೀಣ್ ಕುಮಾರ್ ನ ವಶಕ್ಕೆ ಪಡೆದಿದ್ದಾರೆ. ಇತ್ತ ಪದ್ಮಾವತಿಯನ್ನು ಪೊಲೀಸರು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಪತ್ನಿ ಮೇಲೆ ದಾಳಿ ಮಾಡುವಾಗ ಪ್ರವೀಣ್ ಕುಮಾರ್ ಕೈಗೆ ಗಾಯವಾಗಿದೆ. ಪದ್ಮಾವತಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಕು ಪ್ರವೀಣ್ ಕುಮಾರ್ ಕೈಗೆ ತಾಗಿದೆ. ಇತ್ತ ಪೊಲೀಸರು ಧಾವಿಸಿ ಪ್ರವೀಣ್ ಕುಮಾರ್‌ನಿಂದ ಚಾಕು ವಶಕ್ಕೆ ಪಡೆಯುವಾಗಲೂ ಕೂಡ ಗಾಯವಾಗಿದೆ. ಹೀಗಾಗಿ ಪ್ರವೀಣ್ ಕುಮಾರ್‌ನನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಾಗಿದೆ.

Rakesh arundi

Leave a Reply

Your email address will not be published. Required fields are marked *