Street dogs: ಡಿಸಿಯನ್ನೂ ಅಟ್ಟಾಡಿಸಿದ ಬೀದಿ ನಾಯಿಗಳು!
ದಿನೆ ದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಗಿದ್ದು, ರಸ್ತೆಯಲ್ಲಿ ಜನರು ಒಡಾಡಲು ಭಯ ಪಡುವಂತಾಗಿದೆ. ಇನ್ನೂ ದಾವಣಗೆರೆ ಜಿಲ್ಲಾಧಿಕಾರಿಗಳನ್ನೇ ಬಿಡದೇ ಬೀದಿ ನಾಯಿಗಳು ಅಟ್ಟಾಡಿಸಿದ್ದು, ಅವುಗಳನ್ನು ಕಲ್ಲು ಹೊಡೆದು ಓಡಿಸಿದ್ದೇನೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಜಿ.ಎಂ ಗಂಗಾಧರಸ್ವಾಮಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು , ಜಿಲ್ಲೆಯಲ್ಲಿ ವರ್ಷಕ್ಕೆ 5 ರಿಂದ 6 ಸಾವಿರ ಜನರು ಬೀದಿ ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಅನೇಕರು ಸಾವನ್ನಪ್ಪಿರುವ ಪ್ರಕರಣಗಳು ಜರುಗಿವೆ. ನನಗೂ ಅದರ ಅನುಭವ ಆಗಿದೆ. ಬೆಳಿಗ್ಗೆ ಜಾಗಿಂಗ್ ಹೋಗುತ್ತಿದ್ದಾಗ ಐದಾರು ನಾಯಿಗಳು ನನ್ನನ್ನು ಅಟ್ಟಾಡಿಸಿಕೊಂಡು ಬಂದಿದ್ದವು ಅವುಗಳಿಂದ ತಪ್ಪಿಸಿಕೊಳ್ಳಲು ಕಲ್ಲು ತೆಗೆದುಕೊಂಡು ಓಡಿಸಿದ್ದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಬೀದಿ ನಾಯಿಗಳ ಹಾವಳಿ ಹೆಚ್ಚಗಿದ್ದು, ನಗರ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ಕರೆದು ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಏಡ್ಸ್ ಕಾಯಿಲೆ ಬಂದರೂ 10-50 ವರ್ಷ ಮನುಷ್ಯ ಬದುಕುತ್ತಾನೆ. ಆದರೆ ನಾಯಿ ಕಡಿತ ಅದಕ್ಕಿಂತ ಗಂಭೀರವಾದದ್ದು. ಇದನ್ನು ತಡೆಗಟ್ಟಲು ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ. ನಾಯಿಗಳನ್ನು ಕೊಲ್ಲವ ಹಾಗಿಲ್ಲ . ಹಾಗಾಗಿ ಎನ್‌ಜಿಒ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.