Banglegudda Dharmasthala:ಬುರುಡೆ,ಮೂಳೆ ಸಿಕ್ಕ ನೇರಾನೇರ ದೃಶ್ಯ.! 9 ಅಸ್ಥಿಪಂಜರ, ಬುರುಡೆ ಪತ್ತೆ

ಧರ್ಮಸ್ಥಳದ ನೇತ್ರಾವತಿ ಕಾಡಿನ ಜಾಡು ಹಿಡಿದುಕೊಂಡು ಹೋದ ಎಸ್‌ಐಟಿ ಟೀಮ್‌ಗೆ ಇವತ್ತು ಭರ್ಜರಿ ಭೇಟೆಯೇ ಆಗಿದೆ ಎಂದರೆ ತಪ್ಪಾಗೋದಿಲ್ಲ. ಇಲ್ಲಿಯವರೆಗೂ ಚಿನ್ನಯ್ಯನ ಮಾತು ಕೇಳಿ 10 ರಿಂದ 15 ಅಡಿ ಭೂಮಿಯ ಆಳ ತೆಗೆಸಿದ್ದ ಎಸ್‌ಐಟಿ ಟೀಮ್‌ಗೆ ನಿರಾಸೆ ಎದುರಾಗಿತ್ತು. ಬುರುಡೆ ಗ್ಯಾಂಗ್‌ ಅನ್ನೋ ಪಟ್ಟವೂ,ಆರೋಪ ಮಾಡಿದವ್ರ ಹೆಗಲು ಹತ್ತಿತ್ತು. ಆದ್ರೆ, ಇಂದಿನ ಶೋಧ ಕಾರ್ಯದಲ್ಲಿ ಎಂದೂ ಸಿಗದಷ್ಟು ಬುರುಡೆಗಳು ಸಿಕ್ಕಿವೆ. ಇಷ್ಟು ದಿನದ ಶೋಧ ಕಾರ್ಯದಲ್ಲಿ ಯಾವು ದಿನವೂ ಪತ್ತೆಯಾಗದಷ್ಟು ಕಳೆಬರಗಳು ಪತ್ತೆಯಾಗಿದ್ದು, ಮತ್ತೆ ಧರ್ಮಸ್ಥಳ ಅಕ್ರಮವಾಗಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಅದೂ ಕೂಡ ಇಲ್ಲಿಯವರೆಗೂ ಇಷ್ಟೊಂದು ಸೋಕೋ ಟೀಮ್‌ನಾ ತಾಂತ್ರಿಕ ಸಿಬ್ಬಂದಿಯನ್ನು ಶೋಧ ಕಾರ್ಯದಲ್ಲಿ ಕಂಡೇ ಇರಲಿಲ್ಲ. ಜಡಿ ಮಳೆಯಲ್ಲೂ ಕೂಡ ನಿರಂತರ ಶೋಧ ಕಾರ್ಯಕ್ಕೆ ಬ್ರೇಕ್‌ ಹಾಕದೇ ಇಡೀ ಎಸ್‌ಐಟಿ ಟೀಮ್‌ ಕೆಲಸ ಮಾಡಿದೆ. ಕ್ಯಾಮೆರಾದಲ್ಲಿ ಉಪ್ಪಿನ ಡಬ್ಬಿಗಳಲ್ಲಿ ತಲೆಬುರುಡೆ, ಕೈ ಮೂಳೆಗಳನ್ನು ತೆಗೆದುಕೊಂಡು ಹೋಗುವ ನೇರ ದೃ‍ಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿರೋದ್ರಿಂದ ಈ ತನಿಖೆ ಮತ್ತೊಂದು ರೋಚಕ ಘಟ್ಟ ತಲುಪಿದೆ.

  ಯಾವುದೇ ಆಧಾರಗಳಿಲ್ಲದೇ, ಕೇವಲ ಊಹಾಪೋಹಗಳ ಆಧಾರದಲ್ಲಿ ಸುದ್ದಿಯಾಗ್ತಿದ್ದ ಧರ್ಮಸ್ಥಳ ಪ್ರಕರಣದಲ್ಲಿ ಮೂಳೆ ಹಾಗೂ ತಲೆಬುರುಡೆಗಳು ಸಿಕ್ಕಿರೋ ಸಾಕ್ಷ್ಯಗಳು, ದೃಶ್ಯಗಳು ವೈರಲ್‌ ಆಗ್ತಿರೋದ್ರಿಂದ ಬಂಗ್ಲೆ ಗುಡ್ಡದಲ್ಲಿ ಮತ್ತೇನೂ ನಡೀತಾ ಇತ್ತು ಅನ್ನೋ ಅನುಮಾನಗಳನ್ನು ಹುಟ್ಟು ಹಾಕಿದೆ. ಅಸಲಿಗೆ ಇವತ್ತಿನ ಶೋಧ ಕಾರ್ಯದಲ್ಲಿ ದೊಡ್ಡ ತಂಡವೇ ಇತ್ತು. ಎರಡು ದಿನಗಳ ಹಿಂದಷ್ಟೆ ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ ಮೀಟಿಂಗ್‌ ಮಾಡಿದಾಗ್ಲೇ ಶೋಧಕಾರ್ಯಕ್ಕೆ ಹೊಸ ಅಡಿಪಾಯ ಶುರುವಾಗಿದೆ ಅನ್ನೋ ಮಾತುಗಳು ಕೇಳಿಬರ್ತಿದ್ದವು. ಇದೀಗ, ಎರಡು ಟೀಮ್‌ಗಳಾಗಿ ನೇತ್ರಾವತಿ ನದಿಯ ಪಾಯಿಂಟ್‌ ನಂ. 1 ಮೇಲಿನ ಬಂಗ್ಲೇಗುಡ್ಡದಲ್ಲಿ ಶೋಧ ಕಾರ್ಯಾಚರಣೆ ನಿರಂತರವಾಗಿ ನಡೀತಾ ಇದೆ. ಇನ್ನು, ಇವತ್ತಿನ ಶೋಧ ಕಾರ್ಯದಲ್ಲಿ ಪೂತ್ತೂರಿನ ಎಸಿಯಾಗಲಿ, ತಹಶೀಲ್ದಾರ್‌ ಆಗಲಿ ಶೋಧ ಕಾರ್ಯದ ಭಾಗವಾಗಿರಲಿಲ್ಲ. ಅವ್ರ ಅನುಪಸ್ಥೀತಿಯಲ್ಲೇ, ಅರಣ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲೇ ಬರೋಬ್ಬರಿ 50 ಅಧಿಕಾರಿಗಳ ತಂಡ ಕೆಲಸ ನಿರ್ವಹಿಸಿದೆ.

ಇದಕ್ಕೂ ಮುನ್ನ ಇಂದು ವಿಟ್ಟಲ್‌ ಗೌಡ ಅವ್ರ ಅನುಪಸ್ಥಿತಿಯಲ್ಲೇ ಕಾರ್ಯಾಚರಣೆ ನಡೆದಿದ್ದು, ಅರಣ್ಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಅಲ್ಲಿ ಸಿಕ್ಕಿರೋ ಬುರುಡೆ ಹಾಗೂ ಮೂಳೆಗಳಿಗೂ ವಿಟ್ಟಲ್‌ ಗೌಡ ಹೇಳಿಕೆ ಕೊಟ್ಟಿದ್ದಕ್ಕೂ ಅನೇಕ ತಾಳೆಗಳಿವೆ ಅನ್ನೋ ಸಂಶಯ ಮೂಡಿದೆ. ಮೊನ್ನೆಯಷ್ಟೇ ಐದಾರು ಶವಗಳು ಒಂದೇ ಕಡೆ ಸಿಕ್ಕ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದ ಎಸ್‌ಐಟಿ ಟೀಮ್‌ ಇಂದು ಅದೇ ಕುತೂಹಲದಿಂದ ಶೋಧ ಕಾರ್ಯಕ್ಕೆ ಇಳಿದಿತ್ತು. ಅಚ್ಚರಿ ಎಂಬಂತೆ ಇಂದೂ ಕೂಡ 9 ಕ್ಕೂ ತಲೆ ಬುರುಡೆ ಹಾಗೂ ಮೂಳೆಗಳು ಸಿಕ್ಕಿವೆ ಎನ್ನಲಾಗ್ತಿದೆ.

ಹಾಗಾಗಿ ಅಗೆಯುವ ಕೆಲಸ ಮಾಡದೇ ಸಿಕ್ಕಿರುವ ಅವಶೇಷಗಳನ್ನು ಕಲೆ ಹಾಗಿ ಅಲ್ಲಿ ಮಣ್ಣನ್ನು ಕಲೆ ಹಾಕಿ , ತಲೆ ಬುರುಡೆಗಳನ್ನು ಬಾಕ್ಸ್‌ಗಳಲ್ಲಿ ಸಂಸ್ಕರಿಸಿ ವಾಹನಗಳಲ್ಲಿ ಇಡಲಾಯ್ತು. ಅಚ್ಚರಿ ಎಂದರೆ, ಇಂದು ಚೀಲಗಟ್ಟಲೆ ಉಪ್ಪು, ರಾಶಿಗಟ್ಟಲೆ ಮಣ್ಣನ್ನು ಬೇರ ಬೇರೆ ಚೀಲಗಳಲ್ಲಿ ತುಂಬಿಕೊಂಡು ವಾಹನದಲ್ಲಿ ಕೊಂಡೋಯ್ದಿದ್ದು ಮಾತ್ರ ಭಯಾನಕವಾಗಿತ್ತು. ಇನ್ನು, ಎಫ್‌ಎಸ್‌ಎಲ್‌ ಟೀಮ್‌ಗೆ ಇದೊಂದು ಚಾಲೆಂಜಿಂಗ್‌ ಕೆಲಸವಾಗಿದ್ದು, ಆಸಕ್ತಿದಾಯಕ ಕೇಸ್‌ನಾ ಭೇದಿಸಿದ್ರೆ, ಎಲ್ಲರ ಬಂಡವಾಳ ಬಯಲಾಗಲಿದೆ. ಇದಕ್ಕೂ ಮುನ್ನ ಇದೇ ಜಾಗದಲ್ಲಿ ವಾಮಾಚಾರದ ಮಾತುಗಳು ಕೇಳಿಬರ್ತಿವೆ. ಆ ದಿಕ್ಕಿನಲ್ಲೂ ತನಿಖೆ ಸಾಗ್ತಿರೋದ್ರಿಂದ ಮನುಷ್ಯರನ್ನು ಉದ್ದೇಶ ಪೂರ್ವಕವಾಗಿ ಕೊಲ್ಲಲಾಗಿದೆಯಾ..? ಮೂಳೆಗಳು ಯಾರದ್ದು..? ವಾಮಾಚಾರಕ್ಕೆ ಈ ಮೂಳೆಗಳನ್ನು ಬಳಸಲಾಗಿದೆಯಾ..? ಎಲ್ಲಾ ಅಂಶಗಳು ಬೆಳಕಿಗೆ ಬರಬೇಕಿದೆ. ಒಟ್ಟಾರೆ 9 ಸ್ಥಳಗಳಲ್ಲಿ ಅವಶೇಷಗಳ ಜಾಗಗಳನ್ನು ಗುರುತಿಸಲಾಗಿದೆ.

ರೊಚ್ಚಿಗೆದ್ದ ಜಯಂತ್‌.! ಎಲ್ಲಿ ಧರ್ಮರಕ್ಷಕರೆ ಈಗ ಬನ್ನಿ.!

ಇನ್ನುಈ ಎಲ್ಲಾ ಧನಾತ್ಮಕ ಬೆಳವಣಿಗೆಗಳ ನಡುವೆ ಜಯಂತ್‌ ಅವ್ರು ಲೈವ್‌ ಬಂದು ರೊಚ್ಚಿಗೆದ್ದು ಮಾತನಾಡಿದ್ದು. ಈಗ ಬಂದು ಮಾತನಾಡಿ ಧರ್ಮರಕ್ಷಕರೆ..? ಪಂಚಾಯಿತಿಯವ್ರ ಈಗ ಯುಡಿಆರ್‌ ಮಾಡಿ ಧಫನ್‌ ಮಾಡಿದ್ದೀವಿ ಅಂತಾ ಹೇಳ್ತಾ ಇದ್ದರಲ್ಲವೇ..? ಬನ್ನಿ ಈಗ ಮಾತನಾಡಿ. ಬುರುಡೆ ಗ್ಯಾಂಗ್‌ ಎಂದು ಟೀಕೆ ಮಾಡಿದ್ರೀ ಅಲ್ವಾ.? ನಾವು ಯಾರ ಕಾಸಿಗೂ ಬಂದಿಲ್ಲ. ನ್ಯಾಯದ ಪರ ಬಂದ್ದೀದ್ದೀವಿ. ನೀವು ಪ್ರಶ್ನೆ ಮಾಡಿ. ನಾವು ಯಾವ ಧರ್ಮಕ್ಷೇತ್ರದ ವಿರುದ್ಧ ಹೋರಾಟಕ್ಕೆ ಬಂದಿಲ್ಲ. ಕಾನೂನಿನ ಅರಿವಿಲ್ಲದೇ ನಾವು ಮಾಡಿರಬಹುದು. ಅದ್ರೆ, ಕಾನೂನು ಗೊತ್ತಿಲ್ಲದೇ ಮಾಡಿಲ್ಲ.

ನೀವು ಕಪ್ಪು ಬಟ್ಟೆ ಹಾಕ್ಕೊಂಡು ಬನ್ನಿ ಮಾಸ್ಕ್‌ ಮ್ಯಾನ್‌ ತರಹ. ಕುಣೀತಾ ಬನ್ನಿ. ಈ ಕಾಡನ್ನು ರಕ್ಷಣೆ ಮಾಡೋಣ ಬನ್ನಿ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದ್ರ ಬೆನ್ನಲ್ಲೇ ಗಿರೀಶ್‌ ಮಟ್ಟಣ್ಣನವರ್‌, ಬೋ… ಮಕ್ಕಳು ನಮ್ಮನ್ನು ಬುರುಡೇ ಗ್ಯಾಂಗ್‌ ಲಿಸ್ಟ್‌ ಗೆ ಸೇರಿಸಿದ್ರು. ಈಗ ಎಲ್ಲಾ ಉಲ್ಟಾ ಆಗಿದೆ ಎಂದು ಇನ್‌ಸ್ಟಾ ಪೋಸ್ಟ್‌ ಹಾಕಿದ್ರು. ಇನ್ನು ಲೈವ್‌ ಬರ್ತೀನಿ ಎಂದು ಪೋಸ್ಟ್‌ ಹಾಕಿದ್ದ ಗಿರೀಶ್‌ ಮಟ್ಟಣ್ಣನವರ್‌, ತಾಂತ್ರಿಕ ಸಮಸ್ಯೆಗಳಿಂದ ಆಗ್ತಾ ಇಲ್ಲ. ಮತ್ತೆ ಬರ್ತೀನಿ. ಎಲ್ಲರೂ ಒಗ್ಗಟ್ಟಾಗಿರಿ ಬಲವಾಗಿರಿ ಎಂದು ಪರ ಹೋರಾಟಗಾರರಿಗೆ ಕರೆ ನೀಡಿದ್ದಾರೆ.

ಮಾನವ ಹಕ್ಕುಗಳ ಆಯೋಗಕ್ಕೆ ತಿಮರೊಡಿ ದೂರು

ಆದ್ರೆ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯವಾಗಿ ಪರಿಗಣಿಸಿರೋ ಯಾರನ್ನು ಕೂಡ ತನಿಖಾ ತಂಡದಲ್ಲಿ ಇರಲಿಲ್ಲ ಅನ್ನೋದು ವಿಶೇಷ. ಇನ್ನು ಮಹೇಶ್‌ ತಿಮರೊಡ್ಡಿ 10 ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಮತ್ತು ಮಾಧ್ಯಮ ಚಾನೆಲ್‌ಗಳ ಉಪಸ್ಥಿತಿಯನ್ನು ಒಳಗೊಂಡ ಪೂರ್ವ-ಯೋಜಿತ ಬಂಧನ ಕಾರ್ಯಾಚರಣೆ, ನನ್ನನ್ನು ಅವಮಾನಿಸುವ ಮತ್ತು ಅಪರಾಧಿಯನ್ನಾಗಿ ಮಾಡುವ ಉದ್ದೇಶದಿಂದ ನಡೆಸಲಾಗಿದೆ. ಎಫ್‌ಐಆರ್ 99/25 ರ ಅಡಿಯಲ್ಲಿ ಯುವಕರು ಸೇರಿದಂತೆ ಅಮಾಯಕ ಬೆಂಬಲಿಗರನ್ನು ಗುರಿಯಾಗಿಸುವುದು, ಅಲ್ಲಿ ಅಧಿಕಾರಿಗಳು ಅವರನ್ನು ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ತಪ್ಪಾಗಿ ರೂಪಿಸಲು ಪ್ರಯತ್ನಿಸಿದರು. ಬೆಂಬಲಿಗರ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು (94/25ಮತ್ತು 100/25 ದಾಖಲಿಸಲಾಗಿದೆ.


ನಾನು ನ್ಯಾಯಾಂಗ ಬಂಧನದಲ್ಲಿದ್ದಾಗ ನನ್ನ ವಿರುದ್ಧ, ದಾಖಲೆಗಳು ಸೃಷ್ಟಿಯಾಗಿವೆ ಇದು ಪೋಲೀಸ್ ಕುಶಲತೆಯನ್ನು ಬಹಿರಂಗಪಡಿಸಿದೆ. ತೀವ್ರವಾಗಿ ಅಧಿಕ ಬಿಪಿ ಇರುವ ಕಾರಣ ವೈದ್ಯರು ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸುವ ಶಿಫಾರಸು ಮಾಡಿದರೂ ಸಹ ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೋಮು ಹಿಂಸಾಚಾರದ ಶೂನ್ಯ ಇತಿಹಾಸದ ಹೊರತಾಗಿಯೂ – ರಾಜಕೀಯ ಒತ್ತಡದ ಮೂಲಕ ನನ್ನ ವಿರುದ್ಧ ಗಡಿಪಾರು (ದೇಶಭ್ರಷ್ಟ ಆದೇಶ) ಮಾಡಿಸುವ ಪ್ರಯತ್ನ ನಡೆಯುತ್ತಿವೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಕೊಟ್ಟರು. ಇದ್ರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿರೋ ಘಟನೆ ಕೂಡ ನಡೆದಿದೆ. ರೋಹಿತ್‌ ಪಾಂಡೆ, ಸುಪ್ರೀಂ ಕೋರ್ಟ್‌ನಾ ವಕೀಲರು ದಿಲ್ಲಿ ಸುಪ್ರೀಂ ಕೋರ್ಟ್‌ಗೆ ಧರ್ಮಸ್ಥಳ ಪ್ರಕರಣದಲ್ಲಿ ಸೋಮೋಟೋ ಕೇಸ್‌ ದಾಖಲಿಸಿ ತನಿಖೆ ನಡೆಸುವಂತೆ ಪತ್ರ ಬರೆಯಲಾಗಿದೆ. ಇದೂ ಕೂಡ ಈ ಕೇಸ್‌ನಲ್ಲಿ ವಿಶೇಷ ಬೆಳವಣಿಗೆಗಳಲ್ಲಿ ಒಂದಾಗಿದೆ.

Rakesh arundi

Leave a Reply

Your email address will not be published. Required fields are marked *