Narendra Modi: ಈ ಯುಗದ ಅವತಾರ ಪುರುಷ ಮೋದಿ: ಮುಖೇಶ್ ಅಂಬಾನಿ


ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಕ್ಕೆ ಇಂದು ದೇಶ ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಮುಖೇಶ್ ಅಂಬಾನಿ ಅವರು ವಿಶೇಷವಾಗಿ ಶುಭಕೋರಿದ್ದಾರೆ.

ನರೇಂದ್ರ ಮೋದಿ ಅವರು ಉದ್ಯಮ ವಲಯಕ್ಕೆ ಆಧ್ಯತೆ ನೀಡಿದ್ದು ಮೊದಲು ಗುಜರಾತ್ ಅಂತೆಯೇ ಈಗ ಇಡೀ ದೇಶವೇ ಉದ್ಯಮ ವಲಯದಲ್ಲಿ ಹುಲುಸಾಗಿ ಬೆಳೆಯುವಂತೆ ಮಾಡಿದ್ದಾರೆ ಎಂದು ಅಂಬಾನಿ ಅವರು ಮೋದಿ ಅವರನ್ನು ಪ್ರಶಂಸಿಸಿದ್ದಾರೆ.

ಮೋದಿ ಅವತಾರ ಪುರುಷ.


‘ಭಾರತದ ಅಮೃತ ಘಳಿಗೆಯಲ್ಲಿ ನರೇಂದ್ರ ಮೋದಿ ಅವರ ಅಮೃತ ಮಹೋತ್ಸವ ಬಂದಿರುವುದು ಕಾಕತಾಳೀಯ ಅಲ್ಲ. ಭಾರತವನ್ನು ಈ ಭೂಮಿಯ ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು ಆ ದೇವರೇ ಮೋದಿಯವರನ್ನು ಅವತಾರ ಪುರುಷರನ್ನಾಗಿ ಮಾಡಿ ಕಳುಹಿಸಿದ್ದಾನೆ ಎಂದು ಹೇಳಿದ್ದಾರೆ.

“ಇಂದು ದೇಶದ 145 ಕೋಟಿ ಭಾರತೀಯರಿಗೆ ಹಬ್ಬದ ದಿನ. ನಮ್ಮ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ಪ್ರಧಾನಿ ನರೇಂದ್ರಭಾಯಿ ಮೋದಿ ಜೀ ಅವರ 75ನೇ ಹುಟ್ಟುಹಬ್ಬ, ಭಾರತದ ಇಡೀ ವ್ಯಾಪಾರ ಸಮುದಾಯದ ಪರವಾಗಿ, ರಿಲಯನ್ಸ್ ಕುಟುಂಬ ಮತ್ತು ಅಂಬಾನಿ ಕುಟುಂಬದ ಪರವಾಗಿ, ನಾನು ಪ್ರಧಾನಿ ಮೋದಿ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.

Rakesh arundi

Leave a Reply

Your email address will not be published. Required fields are marked *