ಬಂಗ್ಲೆಗುಡ್ಡದಲ್ಲಿ ಮತ್ತೆ ಶೋಧ ಕಾರ್ಯ ಶುರು..! ಹೈ ಕೋರ್ಟ್ ಆದೇಶದ ಕಡೆಗೆ ಎಸ್ಐಟಿ ಚಿತ್ತ
ಮಾಸ್ಕ್ ಮ್ಯಾನ್ ಚಿನ್ನಯ್ಯ ಬುರುಡೆ ಬಿಟ್ಟಿದ್ದಾನಾ! ಇಲ್ಲವಾ?ಅನ್ನೋದನ್ನು ಎಸ್‌ಐಟಿ ಕನ್ಫರ್ಮ್ ಮಾಡಬೇಕಾಗಿದೆ. ಈ ನಡುವೆ ವಿಠ್ಠಲ್‌ಗೌಡ ಕೊಟ್ಟಿರೋ ಹೈಕೋರ್ಟ್‌ಗೆ ಸಲ್ಲಿಸಿರೋ ಅರ್ಜಿ ಇದೀಗ ಮುನ್ನೆಲೆಗೆ ಬಂದಿದೆ. ಧರ್ಮಸ್ಥಳ ಸಾಮೂಹಿಕವಾಗಿ ಶವ ಹೂತಿಟ್ಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗಗಳು ನಡೀತಾ ಇದ್ದು ಹೈಕೋರ್ಟ್ ಯಾವ ತೀರ್ಮಾನಕ್ಕೆ ಬರಲಿದೆ ಅನ್ನೋದು ಪ್ರಮುಖವಾಗಿದೆ.
ಇತ್ತ ಎಸ್‌ಐಟಿ ತನಿಖೆಯ ವಿರುದ್ಧವಾಗಿ ಹೈಕೋರ್ಟ್ ಮೊರೆ ಹೋಗದಿದ್ದರು. ಎಸ್‌ಐಟಿಗೆ ಒಂದು ಶಕ್ತಿ ನೀಡುವಂತೆ, ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು, ಹಾಗೂ ಅವಶೇಷಗಳ ಬಗ್ಗೆ ತನಿಖೆಯೂ ಆದಷ್ಟು ಬೇಗ ಮುಗಿಯೋ ಸಂಬಂಧವಾಗಿ ಸ್ಥಳಿಯರಾದ ವಿಠ್ಠಲ್‌ಗೌಡ ಹಾಗೂ ತುಕರಾಂ ಗೌಡ ಸಲ್ಲಿಸಿರೋ ರಿಟ್ ಅರ್ಜಿಯಲ್ಲಿ ಉಲ್ಲೇಖವಾಗಿದೆ. ಇನ್ನು ಈ ತನಿಖೆಯ ಭಾಗವಾಗಿ ಎಸ್‌ಐಟಿಗೆ ಕೆಲವು ನಿರ್ದೇಶನಗಳನ್ನು ನೀಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿರೋ ವಿಠ್ಠಲ್‌ಗೌಡ ಮುಂದಿನ ನಡೆಯೇ ನಿಗೂಢವಾಗಿದೆ.
ಇಲ್ಲಿಯವರೆಗೂ ವಿಠ್ಠಲ್‌ಗೌಡ ಅರೆಸ್ಟ್ ಆಗ್ತಾರೆ, ಜೈಲು ಪಾಲಾಗ್ತಾರೆ ಅನ್ನೋ ಊಹಾಪೋಹಕ್ಕೆ ತೆರೆ ಬೀಳಲಿದ್ದು ಮತ್ತೆ ಬಂಗ್ಲೆಗುಡ್ಡದಲ್ಲಿ ಹೊಸದಾಗಿ ಶೋಧ ಕಾರ್ಯ ಮುಂದುವರೆಯುತ್ತಾ ಅನ್ನೋ ಅನುಮಾನಗಳು ದಟ್ಟವಾಗಿ ಕಾಡ್ತಿವೆ.
ಇನ್ನು, ಈ ದೂರಿನಂತೆ, ರಿಟ್ ಅರ್ಜಿಯ ಸಂಬಂಧ ಜಸ್ಟೀಸ್ ನಾಗಪ್ರಸನ್ನ ಎಸ್‌ಐಟಿಗೆ ನೋಟೀಸ್ ಕೂಡ ನೀಡಿದ್ದು ಕೋರ್ಟ್‌ಗೆ ಇದಕ್ಕೆ ಸಂಬಂಧಪಟ್ಟ ರಿಪೋರ್ಟ್ ಕೂಡ ಪಡೆದು ನೀಡಬೇಕು ಎಂದು ಸರ್ಕಾರಿ ಪಿಪಿಗಳಿಗೆ ಆದೇಶ ಕೂಡ ನೀಡಲಾಗಿದೆ.
ಇನ್ನು ಈ ತನಿಖೆ ಎಲ್ಲಿಯವರೆಗೂ ನಡೆದಿದೆ, ವಿಠ್ಠಲ್‌ಗೌಡ ಸ್ಥಳಕ್ಕೆ ಹೋದಾಗ ಸಿಕ್ಕ ಅವಶೇಷಗಳ ಕಥೆ ಏನು..? ಚಿನ್ನಯ್ಯ ಅಪರಾಧಿನಾ ಇಲ್ಲವೇ ಎಂಬುದು ಕೋರ್ಟ್ ಮುಂದೆ ಬರಲಿದೆ. ಇನ್ನು ಇದಕ್ಕೆ ಸಂಬಂಧಪಟ್ಟ ವಿಚಾರಣೆ ಸೆ.18ಕ್ಕೆ ಕೋರ್ಟ್ ಮುಂದೆ ಕೂಡ ಬರಲಿದೆ. ಅಸಲಿಗೆ ಈ ಕೇಸ್‌ನಲ್ಲಿ ಎಸ್‌ಐಟಿ ಎಚ್ಚರಿಕೆಯ ಹೆಜ್ಜೆ ಕೂಡ ಇಡಬೇಕಾಗಿದೆ. ಬಂಗ್ಲೆಗುಡ್ಡದ ಅರಣ್ಯ ಮೀಸಲು ಅರಣ್ಯ ಪ್ರದೇಶವಾಗಿರೋದ್ರಿಂದ, ಅಲ್ಲಿ ಸ್ಥಳ ಅಗೆಯಬೇಕಾದ್ರೆ ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಆ ಜಾಗವನ್ನು ಮಹಜರು ಮಾಡಬೇಕಾದ್ರೆ, ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ಒಂದು ಸಣ್ಣ ತಪ್ಪಾದ್ರು,ಎಸ್‌ಐಟಿ ಎಲ್ಲರ ಮುಂದೆ ತಲೆತಗ್ಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಲ್ಲಿ ಮಹಜರು ನಡೆಸಬೇಕೆ ಬೇಡ್ವೇ ಅನ್ನೋದು ಪ್ರಶ್ನೆಯಾಗಿದೆ.
ಇನ್ನು ಆ ಜಾಗದಲ್ಲಿ ಸಿಕ್ಕಿರೋ ಅವಶೇಷಗಳು ಅಪ್ರಾಪ್ತ ಹೆಣ್ಣು ಮಕ್ಕಳದ್ದು ಅನ್ನೋ ಸುದ್ದಿ ಹರಿದಾಡ್ತಿರೋದ್ರಿಂದ ಈ ಕೇಸ್‌ನಲ್ಲಿ ಕುತೂಹಲ ಕೂಡ ಡಬಲ್ ಆಗಿದೆ. ಇನ್ನು ಸ್ತಳ ಮಹಜರು ನಡೆಸಿದ ನಂತರ ಕಾನ್ಫಿಡೆಂಟ್ ಆಗಿರೋ ವಿಠ್ಠಲ್‌ಗೌಡ ಸೋಶಿಯಲ್ ಮೀಡಿಯಾಗಳ ಮೂಲಕ ರಾಶಿ ರಾಶಿ ಹೆಣಗಳನ್ನು ನಾನು ತೋರಿಸ್ತೀನಿ ಅಂತಾ ಘಂಟಾಘೋಷವಾಗಿ ಒಪ್ಪಿಕೊಳ್ತಿರೋದ್ರಿಂದ , ವಿಟ್ಟಲ್‌ಗೌಡ ಅವ್ರಿಗೆ ನೋಟಿಸ್ ಕೊಟ್ಟು ಅರೆಸ್ಟ್ ಮಾಡ್ತಾರಾ..? ಇಲ್ಲ ಶೋಧಕಾರ್ಯವನ್ನು ಮುಂದುವರೆಸ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಗಮನಕ್ಕೂ ಈ ಕೇಸ್ ಬಗ್ಗೆ ಮಾಹಿತಿ ಹೋಗಿದ್ದು, ಅವರ ಅನುಮತಿ ಪಡೆದು ,ಮುಂದಿನ ಕಾರ್ಯಕ್ಕೆ ಎಸ್‌ಐಟಿ ಅಣಿಯಾಗ್ತಿದೆ. ವಿಠ್ಠಲ್‌ಗೌಡ ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಸಿಕ್ಕಿರೋ ಅವಶೇಷಗಳು, ಇದು ಕೇವಲ ಆರೋಪ ಮಾತ್ರವಲ್ಲ ಅಲ್ಲಿ ರಹಸ್ಯ ಸಮಾಧಿಗಳು ಇನ್ನು ಹೆಚ್ಚಾಗಿವೆ ಅನ್ನೋದನ್ನು ಸಾರಿ ಸಾರಿ ಹೇಳ್ತಿವೆ. ಅದಕ್ಕಾಗಿಯೇ ಕೋರ್ಟ್ ಮಧ್ಯಪ್ರವೇಶ ಮಾಡಿದ್ರೆ, ಈ ಕೇಸ್‌ನಲ್ಲಿ ತಾರ್ಕಿಕ ಅಂತ್ಯ ಕಾಣಲು ಸಾಧ್ಯ ಅನ್ನೋದನ್ನು ರಿಟ್ ಅರ್ಜಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
ಸೌಜನ್ಯ ಕೇಸ್‌ನಲ್ಲೂ ಕೋರ್ಟ್ ಅನೇಕ ಆದೇಶಗಳನ್ನು ನೀಡಿದ್ರು, ಯಾವುದಕ್ಕೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ, ಸೌಜನ್ಯಾಳ ಘೋರ ಅಪರಾಧಕ್ಕೂ ನ್ಯಾಯ ಸಿಗಲೇಬೇಕಾದ್ರೆ, ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾನೇ ಪ್ರತ್ತಕ್ಷದರ್ಶಿ ಸಾಕ್ಷಿ ಎಂದೇ ಒಪ್ಪಿಕೊಂಡಿರೋ ವಿಠ್ಠಲ್‌ಗೌಡ, ಕೋರ್ಟ್ ಉಪಸ್ಥಿತಿಯಲ್ಲಿಯೇ ಮುಂದಿನ ತನಿಖೆ ನಡೆಯಬೇಕು ಎಂದಿದ್ದಾರೆ. ಸಾಧ್ಯವಾಗದಿದ್ದರೆ, ಒಬ್ಬ ನಿವೃತ್ತ ಜರ್ಜ್ ನೇಮಿಸಬೇಕು ಎಂದಿದ್ದಾರೆ.
ಈ ರಿಟ್ ಅರ್ಜಿಯಲ್ಲಿ ಜೀವಿಸುವ ಹಕ್ಕು, ಮೃತರ ಕುಟುಂಬಗಳ ಘನತೆಯ ಹಕ್ಕು, ನ್ಯಾಯಯುತ ತನಿಖೆಯ ಹಕ್ಕು ಕೂಡ ಒಳಗೊಳ್ಳುತ್ತದೆ. ಬಾಹ್ಯ ಒತ್ತಡಗಳಿಗೆ ಮಣಿಯದೆ, ನಿರ್ಭಯವಾಗಿ ಸತ್ಯ ಹೊರಗೆ ತೆಗೆಯಲು ಕೋರ್ಟ್ ಎಸ್‌ಐಟಿಗೆ ಅತ್ಮಸ್ಥೈರ್ಯ ತುಂಬಲಿ ಎಂದು ಮನವಿ ಮಾಡಿರೋದ್ರಿಂದ ಈ ಕೇಸ್‌ಗೆ ಇನ್ನಷ್ಟು ಪುಷ್ಠಿ ಸಿಕ್ಕಿದೆ.
ಅಸಲಿಗೆ ಈ ಕೇಸ್‌ನಲ್ಲಿ ಹಳೇ ಕೇಸ್‌ಗಳು ರೀಓಪನ್ ಆಗಬಹುದು. ಒಟ್ಟಾರೆ ಪಾರದರ್ಶಕ ತನಿಖೆ ನಡೀತಾ ಇರೋದಕ್ಕೆ ಇದು ಕೂಡ ಕಾರಣವಾಗಿದೆ