Love you muddu; ಕುಮಾರ್ ನಿರ್ದೇಶನದ ‘ಲವ್ ಯು ಮುದ್ದು’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್..

ಕೆಮಿಸ್ಟ್ರಿ ಆಫ್‌ ಕರಿಯಪ್ಪ ನಿರ್ದೇಶಕರ ಪ್ರೇಮಕಥೆ ಲವ್ ಯು ಮುದ್ದು ಚಿತ್ರದ ಟೈಟಲ್ ಟ್ರ್ಯಾಕ್ ಅನಾವರಹಾಡಿನಲ್ಲಿ ಲವ್ ಯು ಮುದ್ದು..ಬಿಂದಾಸ್ ಆಗಿ ಕುಣಿದ ಸಿದ್ದು-ರೇಷ್ಮಾ

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಖ್ಯಾತಿಯ ಕುಮಾರ್ ಸಾರಥ್ಯದ ಹೊಸ ಸಿನಿಮಾ ಲವ್ ಯು ಮುದ್ದು ಈಗಾಗಲೇ ಟೈಟಲ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದೆ.‌ಇದೀಗ ಈ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಎಂಟಿಆರ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಲವ್ ಯು ಮುದ್ದು ಚಿತ್ರದ ಮೆಲೋಡಿ ಗೀತೆ ರಿಲೀಸ್ ಆಗಿದೆ. ಅನಿರುದ್ಧ್ ಶಾಸ್ತ್ತೀ ಸಾಹಿತ್ಯ ಬರೆದು ಸಂಗೀತ ನೀಡಿರುವ ಹಾಡಿಗೆ ಸೋನು ನಿಗಮ್, ಐಶ್ವರ್ಯ ರಂಗರಾಜನ್ ಹಾಗೂ ಸುರಭಿ ಭಾರದ್ವಾಜ್ ಕಂಠ ಕುಣಿಸಿದ್ದಾರೆ. ಲವ್ ಯು ಮುದ್ದು ಅಂತಾ ನಾಯಕ ಸಿದ್ದು ಕುಣಿದಿದ್ದು, ನಾಯಕಿ ರೇಷ್ಮಾ ಹಾಡಿನಲ್ಲಿ ಮಿಂಚಿದ್ದಾರೆ.

ಲವ್ ಯು ಮುದ್ದು ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮ ಕಥಾ ಹಂದರ ಒಳಗೊಂಡಿದೆ. ಕಿರುತೆರೆ ಮತ್ತು ಅಜ್ಞಾತವಾಸಿ ಸಿನಿಮಾ ಖ್ಯಾತಿಯ ಸಿದ್ದು ನಾಯಕನಾಗಿ, ಯುವನಟಿ ರೇಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಉಷಾ ಚಿತ್ರದಲ್ಲಿದ್ದಾರೆ.

ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಕಿಶನ್ ಟಿಎನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ TS ಜೊತೆಯಾಗಿ ನಿಂತಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿಎಸ್ ದೀಪು ಸಂಕಲನ ಚಿತ್ರಕ್ಕಿದೆ.

Rakesh arundi

Leave a Reply

Your email address will not be published. Required fields are marked *