Sensus:ಶಿಕ್ಷಕರ ಗೋಳು ಕೇಳೋರಿಲ್ಲ. ದಸರಾ ರಜೆ ಇಲ್ಲ.! ಜನಗಣತಿಯಲ್ಲಿ ಫುಲ್ ಬ್ಯುಸಿ
ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ ಸೆ.22 ರಿಂದ ಅಕ್ಟೋಬರ್ 07 ರವರೆಗೆ ನಡೆಯಲಿರೋ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗ್ತಿದೆ. ಈಗಾಗಿ ಸರ್ಕಾರಿ ಶಾಲೆಯ ಶಿಕ್ಷಕರು ದಸರಾ ರಜೆ ಇಲ್ಲದೇ ಈ ವರ್ಷ ಕೆಲಸ ಮಾಡಬೇಕಾಗಿದೆ. ಆದ್ರೆ ಇದಕ್ಕೆ ತಕ್ಕಂತೆ ಶಿಕ್ಷಕರಿಗೆ ಗಳಿಕೆ ರಜೆಯಾಗಲಿ, ಗೌರವ ಧನವಾಗಲಿ ಸರ್ಕಾರದಿಂದ ಸಿಗ್ತಾ ಇಲ್ಲ. ಇದರಿಂದ ಶಿಕ್ಷಕರು ರೋಸಿಹೋಗಿದ್ದಾರೆ. ಈ ವರ್ಷದ ದಸರಾ ರಜೆ ಸೆ. 20 ರಿಂದ ಆರಂಭವಾಗಿ ಅಕ್ಟೋಬರ್ 07ಕ್ಕೆ ಮುಗಿಯುತ್ತದೆ. ಆದ್ರೆ ಈ ವರ್ಷದ ರಜೆಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ಕೆ ನಿಯೋಜನೆ ಮಾಡಿರೋದು ಶಿಕ್ಷಕರಿಗೆ ತಲೆನೋವಾಗಿದೆ.
ರಾಜ್ಯಾದ್ಯಂತ ಒಂದರಿಂದ- ಒಂದುವರೆ ಲಕ್ಷ ಶಿಕ್ಷಕರನ್ನು ಈಗಾಗ್ಲೇ ಬಳಕೆ ಮಾಡಲಾಗ್ತಿದೆ. ಈ ಶಿಕ್ಷಕರಿಗೆ ಇದ್ರಲ್ಲಿ ಭಾಗವಹಿಸಲು ಇಂಟ್ರೆಸ್ಟ್ ಇದ್ಯಾ ಅನ್ನೋದು ಮುಖ್ಯವಲ್ಲ. ಅವರಿಗೆ ಗೌರವ ಧನ ನಿರೀಕ್ಷೆ ಇದೆಯಾ ಅನ್ನೋದನ್ನು ಮನಗಾಣಬೇಕು. ಈ ಶಿಕ್ಷಕರಿಗೆ ಸೆ.13 ರಿಂದ ತರಭೇತಿ ಶುರುವಾಗಿದ್ದು, ಸೆ. 19 ರವರೆಗೆ ತರಭೇತಿ ನಡೆಯಲಿದೆ. ಸಂಜೆ 05 ಗಂಟೆಯವರೆಗೆ ತರಭೇತಿ ನೀಡಲಾಗುತ್ತಿದೆ. ಇದರ ಮಧ್ಯದಲ್ಲೇ ಬೇರೆ ಇಲಾಖೆಯ ಸಿಬ್ಬಂದಿಗಳು ಇದ್ರಲ್ಲಿ ಕೆಲಸ ಮಾಡಿದರೆ ಗಳಿಕೆಯ ರಜೆ ಹಾಗೂ ಗೌರವ ಧನ ಸಿಗುತ್ತಿದೆ. ಶಾಲಾ ಶಿಕ್ಷಕರಿಗೆ ಈ ಸೌಲಭ್ಯ ಇದ್ದರೂ ಕೂಡ ದೊರಕುತ್ತಿಲ್ಲ.
ಕ್ಷೀರಭಾಗ್ಯ,ಅನ್ನಭಾಗ್ಯಕ್ಕೆ ಸೀಮಿತ
ಈಗಾಗ್ಲೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಮ್ಮಿ ಇದ್ದು, ಬೇರೆ ಇಲಾಖೆಯ ಕೆಲಸಗಳನ್ನು ಶಿಕ್ಷಕರ ಮೇಲೆ ಹೇರಲಾಗುತ್ತಿದೆ. ಹಾಗೂ ಕೆಲವು ಜನರಿಗೆ ತಲುಪಿಸುವ ಸರ್ಕಾರಿ ಯೋಜನೆಗಳ ಕೆಲಸವನ್ನು ಸರ್ಕಾರಿ ಶಿಕ್ಷಕರೇ ಮಾಡಬೇಕಾಗಿದೆ. ಹಾಗಾಗಿ ಶಿಕ್ಷಕರಿಗೆ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ, ಬೇರೆ ಕೆಲಸಗಳೇ ಡಬಲ್ ಆಗಿವೆ. ಇದು ಶಿಕ್ಷಕರಿಗೆ ಬೇಸರ ತರಿಸಿದೆ ಎನ್ನಬಹುದು. ಇದ್ರ ಜೊತೆ ಜೊತೆಗೆ ಶಿಕ್ಷಣ ಹೇಳಿಕೊಡುವ ಜೊತೆಗೆ ಕ್ಷೀರಭಾಗ್ಯ, ಮಾಸಿಕ ಪರೀಕ್ಷೆ, ಅನ್ನಭಾಗ್ಯ, ರಾಗಿಮಾಲ್ಟ್ ವಿತರಣೆ, ಸಮವಸ್ತ್ರ ವಿತರಣೆ ಶೂ, ಶಾಕ್ಸ್ ಪಠ್ಯಪುಸ್ತಕ ವಿತರಣೆ ಈಗೆ ಒಂದಿಲ್ಲೊಂದು ಕೆಲಸಗಳನ್ನು ವರ್ಷದಿಂದ ವರ್ಷಕ್ಕೆ ಡಬಲ್ ಮಾಡುತ್ತಲೇ ಸರ್ಕಾರ ಜವಾಬ್ದಾರಿಗಳನ್ನು ಶಿಕ್ಷಕರ ಹೆಗಲ ಮೇಲೆ ಹೇರುತ್ತಿದೆ.