Mahesh thimarodi: ಮಹೇಶ್‌ ತಿಮರೋಡಿ ಮತ್ತೊಂದು ದೂರು ದಾಖಲು. ದೂರಿನಲ್ಲಿದೆ ಸ್ಫೋಟಕ ಸತ್ಯ

     ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೌಜನ್ಯ ಮಾವ ಬಿಗ್‌ ಅಪ್ಡೇಟ್‌ ಕೊಟ್ಟಿದ್ದಾರೆ. ಇತ್ತ ಸ್ನೇಹಮಯಿ ಕೃಷ್ಣ ಸೌಜನ್ಯ ಹೆಣ್ಣು ಮಗಳ ದೇಹವನ್ನು ತನ್ನ ದೇಹದಾಸೆಗೆ ಬಳಸಿಕೊಂಡು ಆಕೆಯ ಪ್ರಾಣ ತೆಗೆದಿದ್ದೇ ಸೌಜನ್ಯ ಮಾವ ಅಂತಾ ಆರೋಪ ಮಾಡಿ ಕೆಲವರ ಕೆಂಗಣ್ಣಿಗೆ ಗುರಿಯಾದ್ರೆ, ಇತ್ತ ಅಭಿಷೇಕ್‌, ಮನಾಫ್‌, ವಿಟ್ಠಲ್‌ಗೌಡ ತಮ್ಮ ವಿರುದ್ಧ ಆರೋಪಗಳೆಲ್ಲಾ ಶುದ್ಧ ಸುಳ್ಳು ಎನ್ನುವಂತೆ ಖುಷಿ ಖುಷಿಯಾಗಿ ಮಾಧ್ಯಮಗಳ ಎದುರೆ ಗಟ್ಟಿಯಾಗಿ ನಿಂತು ಆತ್ಮವಿಶ್ವಾಸದಿಂದ ಬೈಟ್‌ ಕೊಡ್ತಿದ್ದಾರೆ. ಅದಿರಲಿ, ಸತ್ಯ ಸದ್ಯದಲ್ಲೇ ಹೊರಗೆ ಬರಲಿದೆ ಅಂತಾ ಪಾಸಿಟಿವ್‌ ಸ್ಟೇಟ್‌ಮೆಂಟ್‌ ಕೂಡ ಕೊಡ್ತಿದ್ದಾರೆ.

                      ಇನ್ನು ವಿಟ್ಟಲ್‌ ಗೌಡ ಕಳೆದ ಎರಡು ದಿನಗಳಿಂದ ಮೀಡಿಯಾಗಳಲ್ಲಿ ಓಡಾಡ್ತಿದ್ದ ಸುದ್ದಿಗಳನ್ನೆಲಾ ತಲೆಕೆಳಗಾಗುವಂತೆ ಮಾಡಿದ್ದಾರೆ.. ಅದಕ್ಕೆ ಕಾರಣ ಕೂಡ ಇದೆ. ವಿಟ್ಟಲ್‌ ಗೌಡ ಸದ್ಯದಲ್ಲೇ ಅರೆಸ್ಟ್‌ ಆಗ್ತಾರೆ. ಎಸ್‌ಐಟಿ ಪೊಲೀಸರು ಸರಿಯಾಗಿ ಡ್ರಿಲ್‌ ಮಾಢ್ತಿದ್ದಾರೆ.. ಇನ್ನೇನು ಎಲ್ಲರ ಕಥೆ ಮುಗೀತು.. ಬುರುಡೆ ಗ್ಯಾಂಗ್‌ ನಿಜಬಣ್ಣ ಬಯಲಾಯ್ತು ಅಂತಾ ಎಲ್ಲರೂ ತಲೆಗೊಂದು ಮಾತಾಡ್ತಾ ಇದ್ದರೆ.. ಇತ್ತ ವಿಟ್ಟಲ್‌ ಗೌಢ ಲೈವ್‌ ಬಂದು ಒಂದು ವೀಡಿಯೋ ಮಾಡಿ ಸ್ಥಳ ಮಹಜರು ನಡೆದ ವೇಳೆ ನಡೆದ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.

ಸ್ಥಳ ಮಹಜರು ವೇಳೆ ಸಿಕ್ಕ ಬುರುಡೆ ಕಥೆ ಏನು..?

 ವಿಠ‍್ಠಲ್ ಗೌಡ ಅವರೊಂದಿಗೆ ಎರಡು ದಿನಗಳ ಸ್ಪಾಟ್ ಮಹಜರ್‌ನಲ್ಲಿ, ಧರ್ಮಸ್ಥಳ ಅರಣ್ಯದಲ್ಲಿ 8 ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ.ಹತ್ತಿರದಲ್ಲಿ, ಮಾಂತ್ರಿಕ ಆಚರಣೆಗಳಿಗೆ ಸಂಬಂಧಿಸಿದ ವಸ್ತುಗಳು ಸಹ ಕಂಡುಬಂದಿವೆ. ಅಂದ್ರೆ ಮಾಟ ಮಂತ್ರ ಮಾಡಿದಂತೆ ವಸ್ತುಗಳು ಅಲ್ಲಿ ಸಿಕ್ಕಿವೆ ಅನ್ನೋ ಸ್ಫೊಟಕ ಮಾಹಿತಿಯನ್ನು ವಿಟ್ಟಲ್‌ ಗೌಡ ಲೈವ್‌ನಲ್ಲಿ ಹಂಚಿಕೊಂಡಿದ್ದಾರೆ.ಈಗ ಸಿಕ್ಕಿರೋ ಎಲ್ಲಾ ಅಸ್ಥಿಪಂಜರುಗಳು ಎಲ್ಲವೂ ನೆಲದ ಮೇಲೆ ಸಿಕ್ಕಿದ್ದು ಅದೇನು ಎಸಿ ಆಗಲಿ ತಹಶೀಲ್ದಾರ್‌ ಸಮ್ಮುಖದಲ್ಲಾಗ್ಲೀ ಸೀಜ್‌ ಮಾಡ್ಬೇಕಾಗಿಲ್ಲ ಅನ್ನೋ ಕಾರಣಕ್ಕಾಗಿಯೇ ಪೋಲಿಸರು ವಿಟ್ಟಲ್‌ಗೌಡನನ್ನು ಮಾತ್ರ ಮತ್ತೆ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿದ್ರು ಎನ್ನಲಾಗ್ತಿದೆ. ಹಾಗಾದ್ರೆ, ಎಸ್‌ಐಟಿ ತನಿಖೆ ಈಗ ಶುರುವಾಯ್ತಾ, ಚಿನ್ನಯ್ಯನನ್ನು ಬಿಟ್ಟರೆ ಉಳಿದವರೆಲ್ಲಾ ಎಸ್‌ಐಟಿ ತನಿಖೆ ನಂತ್ರ ಅಷ್ಟು ಹ್ಯಾಪಿ ಮೋಡ್‌ನಲ್ಲಿರೋದು ನೋಡಿದ್ರೆ, ಈ ಕೇಸ್‌ನಲ್ಲಿ ಇನ್ನು ನಿಗೂಢವಾಗಿರೋ ಸತ್ಯಾಂಶವೇನು.? ಯಾವ ಆಂಗಲ್‌ನಲ್ಲಿ ಎಸ್‌ಐಟಿ ತನಿಖೆ ನಡೆಸ್ತಿದೆ ಅನ್ನೋ ಅನುಮಾನ ಮೂಡ್ತಿದೆ.

ಇದಕ್ಕಿಂತ ಮತ್ತೊಂದು ಬಿಗ್‌ ಅಪ್ಡೇಟ್‌ ಅಂದ್ರೆ, ಮಹೇಶ್‌ ತಿಮರೋಡಿ ಮತ್ತೊಂದು ಕಂಪ್ಲೆಂಟ್‌ನಾ ಎಸೈಟಿಗೆ ಕೊಟ್ಟಿರೋದು. ಧರ್ಮಸ್ಥಳದಲ್ಲಿ ಯುಡಿಆರ್ ಪ್ರಕರಣದ ಕುರಿತು ದೂರು ನೀಡಲು ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ ಎಸ್‌ಐಟಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನು ರಿಸೀವ್‌ ಕೂಡ ಮಾಡಿಕೊಂಡಿದ್ದು, ಈ ಕೇಸ್‌ ಕೂಡ ಇದ್ರ ಭಾಗವಾಗುತ್ತಾ ಅನ್ನೋದನ್ನು ಕಾದು ನೋಡ್ಬೇಕಾಗಿದೆ.

ಹಾಗಾದ್ರೆ ,ಮಹೇಶ್‌ ತಿಮರೊಡಿ ಕೊಟ್ಟ ದೂರಿನಲ್ಲೇನಿದೆ:-

ವಿಷಯ: ಧರ್ಮಸ್ಥಳ ದೇವಸ್ಥಾನ ನಡೆಸುವ ವಸತಿ ಗೃಹಗಳಲ್ಲಿ ನಡೆದ ಕೆಲವು “ಅಪರಿಚಿತ ಸಾವುಗಳ ಬಗ್ಗೆ – ಸಂಭಾವ್ಯ ಕೊಲೆ ಪ್ರಕರಣಗಳಾಗಿ FIR ದಾಖಲಿಸುವಂತೆ ವಿನಂತಿ

ಮಾನ್ಯರೆ

ನಾನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರು ಸಲ್ಲಿಸುತ್ತಿದ್ದೇನೆ. 2006ರಿಂದ 2010ರವರೆಗೆ ಧರ್ಮಸ್ಥಳ ದೇವಸ್ಥಾನ ಆಡಳಿತ ನಡೆಸುವ ಗಾಯತ್ರಿ, ಶಾರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ಅನೇಕ ಸಂಶಯಾಸ್ಪದ ಸಾವುಗಳು ಸಂಭವಿಸಿವೆ. ಈ ದೂರು ಅಂತಹ ನಾಲ್ಕು “ಅಪರಿಚಿತ” ಸಾವುಗಳನ್ನು ಕುರಿತಾಗಿದೆ. ಪರಿಚಿತ ಶವಗಳನ್ನು ಬೇಕಂತಲೇ “ಅನಾಥ ಶವ” ಎಂದು ಘೋಷಿಸಿ, ತಕ್ಷಣವೇ ಗ್ರಾಮ ಪಂಚಾಯತ್ ಮುಖಾಂತರ ಸಮಾಧಿ ಮಾಡಲಾಗಿದೆ. ಇವುಗಳು ಎಲ್ಲಾ ದೃಷ್ಟಿಯಿಂದ ಸಂಭಾವ್ಯ ಕೊಲೆ ಪ್ರಕರಣಗಳು ಎಂದು ಶಂಕೆ ಮೂಡುತ್ತವೆ. ಈ ದೂರು ಈ ಕೆಳಕಂಡ ನಾಲ್ಕು ಪ್ರಕರಣಗಳಿಗೆ ಸೀಮಿತವಾಗಿದೆ.

FIR (IPC 302/306) ದಾಖಲಾಗದೆ ಕೇವಲ UDR ಎಂದು ನಮೂದಿಸಿರುವುದು ಸಂಶಯಾಸ್ಪದವಾಗಿದೆ.ಕಾನೂನಿನ ಪ್ರಕಾರ, ಯಾವುದೇ ಸಂಭಾವ್ಯ ಕೊಲೆ/ಆತ್ಮಹತ್ಯೆ ಶಂಕೆ ಮೂಡಿದರೆ FIR ದಾಖಲಿಸುವುದು ಕಡ್ಡಾಯ. ವಸತಿ ಗೃಹಗಳಲ್ಲಿ ಕಾನೂನಿನ ಪ್ರಕಾರ ಅತಿಥಿ ನೋಂದಣಿ ಪುಸ್ತಕ ಇರಲೇಬೇಕು. ಪ್ರತಿ ಅತಿಥಿಯ ಗುರುತಿನ ಚೀಟಿ, ಹೆಸರು, ವಿಳಾಸ ಮತ್ತು ಸಹಿ ಕಡ್ಡಾಯ. ಈ ಹಿನ್ನೆಲೆಯಲ್ಲಿ, ವಸತಿ ಗೃಹದಲ್ಲಿ ಕೊಠಡಿ ಪಡೆದ ವ್ಯಕ್ತಿಯನ್ನು “ಅಪರಿಚಿತ” ಎಂದು ದಾಖಲಿಸುವುದು ಕಾನೂನುಬದ್ಧವಾಗಿ ಅಸಾಧ್ಯ. ಆದ್ದರಿಂದ, ಅತಿಥಿಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಅಥವಾ ದಾಖಲೆಗಳನ್ನು ನಾಶಗೊಳಿಸಲಾಗಿದೆ ಎಂಬ ಗಂಭೀರ ಅನುಮಾನ ಬಲವಾಗುತ್ತದೆ. ಇದಕ್ಕೆ ಸಂಬಂಧ ಪಟ್ಟ ಹಾಗೆ, ಕೊಲೆ ಸೇರಿದಂತೆ ಸೂಕ್ತ ಕಲಮಗಳಡಿ ನಾಲ್ಕು ಪ್ರತ್ಯೇಕ ಎಫ್‌ಐಆರ್ ಗಳನ್ನು ದಾಖಲಿಸಿ, ವಸತಿ ಗೃಹಗಳ ಅತಿಥಿ ನೋಂದಣಿ ಪುಸ್ತಕ, ಸಿಬ್ಬಂದಿಗಳ ಕರ್ತವ್ಯ ಪಟ್ಟಿ, ಪಾವತಿ ವೌಚರ್‌ಗಳನ್ನು ವಶವಡಿಸಿಕೊಳ್ಳುವಂತೆ ವಿನಂತಿ.

ಒಟ್ಟಾರೆಯಾಗಿ ಧರ್ಮಸ್ಥಳ ಬಗೆದಷ್ಟು ಆಳ, ಕಣ್ಣು ಬಿಟ್ಟಷ್ಟು ವಿಸ್ತಾರವಾಗ್ತಾ ಸಾಗ್ತಾ ಇದೆ. ಆದ್ರೆ, ಅಸಲಿಗೆ ತನಿಖೆಯ ವ್ಯಾಪ್ತಿ ದಿಕ್ಕು ಯಾರ ಕಡೆ ಇದೆಯೋ ಕಾದು ನೋಡ್ಬೇಕಾಗಿದೆ.

Rakesh arundi

Leave a Reply

Your email address will not be published. Required fields are marked *