Dharmasthala: ಯ್ಯುಟ್ಯೂಬರ್‌ ಮೇಲೆ ಮತ್ತೆ ಹಲ್ಲೆಗೆ ಮುಂದಾಗಿದ್ದ ಧರ್ಮಸ್ಥಳ ಸ್ಥಳಿಯರು. ಅಜಯ್‌ ಅಂಚನ್‌ ಪಾರು.!

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮತ್ತೆ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಕಾಣಿಸ್ತಿವೆ. ಕಾರಣ, ಕುಡ್ಲಾ ರಾಮ್‌ಪೇಜ್‌ ಅಜಯ್‌ ಅಂಚನ್‌ ಅವ್ರ ಮೇಲೆ ಮತ್ತೊಂದು ಸ್ಥಳಿಯರ ತಂಡ ಹಲ್ಲೆ ನಡೆಸಲು ಮುಂದಾಗಿದ್ದು,ಅದೃಷ್ಟವಶಾತ್‌ ಪೊಲೀಸರು ಸ್ಥಳದಲ್ಲೇ ಇದ್ದದ್ರಿಂದ ಏನು ಅಚಾತುರ್ಯ ನಡೆಯಲಿಲ್ಲ..

ಅಲ್ಲಿನ ಜನ್ರ ಆಕ್ರೋಶ ಒಂದೇ ಆಗಿದೆ. ಈತನಿಗೆ ಇನ್ಫರ್ಮೇಷನ್‌ ಕೊಡೋದ್ಯಾರು.. ನಿಮ್ಮ ದೊಡ್ಡ ಚಾನೆಲ್‌ಗಳಲ್ಲಿ ಇದ್ಯಾವುದೂ ಬರೋದಿಲ್ಲ. ಅಷ್ಟು ಬುರುಡೆ ಸಿಕ್ಕಿದೆ.ಇಷ್ಟು ಬುರುಡೆ ಸಿಕ್ಕಿದೆ. ಇದೆಲ್ಲಾ ಯಾಕೆ ಹುಟ್ಟಿಸಿಕೊಂಡು ಹೇಳ್ತಿದ್ದಾನೆ ಅವ. ಬ್ಯಾವರ್ಸಿ ಅಂತೆಲ್ಲಾ ಏಕ ವಚನದಲ್ಲಿ ಆಕ್ರೋಶ ಹೊರ ಹಾಕಿದ್ರು. ಆದ್ರೆ ಕುಡ್ಲಾ ಅಜಯ್‌ ಅಂಚನ್‌ ಹೇಳೋದೇನಂದ್ರೆ, ನಾನೆಲ್ಲೂ 3 ಕ್ಕಿಂತ ಹೆಚ್ಚು ಬುರಡೆ ಸಿಕ್ಕಿದೆ ಅಂತಾ ಹೇಳಿಲ್ಲ.ದಾಖಲೆ ತೋರಿಸ್ಲಿ.ನಾನು ಆ ಪುಂಡರ ವಿರುದ್ದ ಕಂಪ್ಲೆಂಟ್‌ ಕೊಡ್ತೀನಿ.ಕಂಪ್ಲೆಂಟ್‌ ಕಾಪಿಯಲ್ಲಿ ಕೆಲವೊಂದು ಆಲ್ಟರೇಷನ್‌ ಇತ್ತು.ಇವತ್ತು ಅವ್ರ ವಿರುದ್ಧ ಕ್ರಮ ತೆಗೆದುಕೊಳ್ತೇನೆ ಅಂತಾ ಅಲ್ಲಿ ನಡೆದ ಘಟನೆ ಬಗ್ಗೆ ವಿವರಣೆ ಕೊಟ್ಟರು..

ಒಟ್ಟಾರೆಯಾಗಿ, ಅಲ್ಲಿ ಯ್ಯೂಟ್ಯೂಬರ್ಸ್‌ಗಳ ವರದಿಗಿಂತ, ಮೈನ್‌ ಸ್ಟ್ರೀಮ್‌ ಮೀಡಿಯಾಗಳ ವರದಿಯನ್ನೇ ನಾವು ಒಪ್ಪೋದು ಅನ್ನೋದು ಅವ್ರ ಮಾತುಗಳಲ್ಲಿ ಕೇಳಿ ಬರ್ತಿತ್ತು.. ಅವನ್ಯಾಗೆ ಮಾತಾಡ್ತಾನೋ ನಾವು ಅದೇ ರೀತಿಯಾಗಿ ಹಂಗೆ ಮಾತಾಡ್ತೀವಿ.. ಬೋ… ಮಗ. ಮಂಗಳೂರಿನವನು ಅವನು. ಇಲ್ಯಾಕೆ ಬಂದು ಮಾತಾಡೋದು. 50 ಸಿಕ್ಕಿದೆ ಅಂತಾ ಯಾಕೆ ಹೇಳ್ತಾನೆ ಅವನು. ಬ್ಯಾವರ್ಸಿ ಶಿಖಂಡಿಯಾಗಿ ನಿಂತಿದ್ದಾನೆ ಅವನು ಅಂತೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸ್ತಾ ಇದ್ದರು.

ಇನ್ನೊಂದ್ಕಡೆ 58 ಮೃತದೇಹಗಳು ಸಿಕ್ಕಿದೆ ಅಂತಾ ಅಜಯ್‌ ಅಂಚನ್‌ ಸ್ಟೇಟಸ್‌ ಹಾಕಿದ್ದಾರಂತೆ.. ಅದ್ರೆ, ನಾನು ಹಾಕೆ ಇಲ್ಲ ಅಂತಾ ಅಜಯ್‌ ಅಂಚನ್‌ ಸಮರ್ಥನೆ ಕೊಡ್ತಿದ್ದಾರೆ. ಅವ್ರ ನ್ಯೂಸ್‌ಗೆ ಕ್ಲಾರಿಟಿ ಇಲ್ಲ. ಅಂತೆಲ್ಲಾ ಸ್ಥಳಿಯರು ಆಕ್ರೋಶ ಹೊರಹಾಕ್ತಿದ್ದರು.ಅದೇನೆ ಇರಲಿ.ಅಲ್ಲಿ ಎಸ್‌ಐಟಿ ತನಿಖೆ ನಡೀತಿದೆ.. ಪೊಲೀಸರು ಇದ್ದಾರೆ.. ಆದ್ರೆ, ಸ್ಥಳಿಯರಿಗೆ ಕಾನೂನು ಕೈಗೆತ್ತಿಕೊಳ್ಳುವ ಯಾವ ಪ್ರಯತ್ನ ಮಾಡಬಾರದು.. ಒಂದು ವೇಳೆ ಅಜಯ್‌ ಅಂಚನ್‌ ಪ್ರಚೋದನೆಯ ಮಾತುಗಳನ್ನಾಡಿದ್ರೆ. ಯಾರನ್ನಾದ್ರೂ ಕೆರಳಿಸಿದ್ರೆ, ತಪ್ಪು ಮಾಹಿತಿ ನೀಡಿದ್ರೆ, ಅವ್ರ ಮೇಲೆ ಕಾನೂನು ಜರುಗಿಸಲು ಮುಂದಾಗಬಹುದು. ನೀವು ದೂರು ಕೊಟ್ಟರೆ ಖಂಡಿತ ಪೊಲೀಸರೆ ಕ್ರಮಕ್ಕೆ ಮುಂದಾಗ್ತಾರೆ.. ಆದ್ರೆ, ಈ ರೀತಿ ರೌಡಿಗಳ ರೀತಿ ಯಾರೂ ವರ್ತಿಸಿದ್ರೂ, ನಮ್ಮ ವ್ಯವಸ್ಥೆಗೆ ವಿರುದ್ಧವಾದ ನಡೆಯಾಗುತ್ತೆ.

Rakesh arundi

Leave a Reply

Your email address will not be published. Required fields are marked *