Dr. Vishnuvardhan: ವಿಷ್ಣುದಾದ ಪ್ರೀತಿಸಿದ ಹುಡುಗಿಯೇ ಸುಚಿತ್ರಾ.! ಎಂದೂ ಮರೆಯದ ಗೆಳತಿ.
ಡಾ.ವಿಷ್ಣುವರ್ಧನ್ ನಟಿ ಭಾರತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ, ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂಬ ಮಾತಿನಂತೆ ಹಚ್ಚಿಕೊಂಡಿದ್ರು. ಅಪ್ಪಿಕೊಂಡಿದ್ರು. ನಟಿ ಭಾರತಿಯನ್ನು ಬಾಳಸಂಗಾತಿಯಾಗಿ ಒಪ್ಪಿ ಆದರ್ಶ ದಂಪತಿಗಳಂತೆ ಬಾಳ್ವೆ ನಡೆಸಿದ್ರು. ಆದ್ರೆ, ಕಾಲೇಜ್ ದಿನಗಳಲ್ಲಿ ವಿಷ್ಣುದಾದಾಗೆ ಹಿಡಿಸಿದ ಗೆಳತಿಯೇ ಸುಚಿತ್ರಾ.? ಹಾಗಾದ್ರೆ, ಈ ಸುಚಿತ್ರಾ ಯಾರು.? ಎಲ್ಲಿದ್ದಾರೆ. ಹೇಗಿದ್ದಾರೆ ಗೊತ್ತಾ.?
ನಿಜ ಹೇಳಬೇಕು ಅಂದ್ರೆ, ವಿಷ್ಣುವರ್ದನ್ ವ್ಯಕ್ತಿತ್ವವನ್ನು ಬದಲಾಯಿಸಿದ ಹುಡುಗಿಯೇ ಸುಚಿತ್ರ. ಕಾಲೇಜ್‌ನಲ್ಲಿ ಆರಾಮಾಗಿ ಹರಟೆ ಹೊಡೆಯುತ್ತಾ ಕೂತ್ರೆ, ಸುಚಿತ್ರಾ ವಿಷ್ಣು ಮಾತಿಗೆ ಮರುಳಾಗಿ ಹೋಗಿದ್ರು. ವಿಷ್ಣು ಹೇಗೆ ಬಟ್ಟೆ ತೊಡಬೇಕು, ಹೇಗೆ ನಡೀಬೇಕು. ಹೇಗೆ ಪರ್ಸಾನಾಲಿಟಿ ಇಂಪ್ರೂವ್ ಮಾಡಿಕೊಳ್ಳಬೇಕು, ಇದೆಲ್ಲಾ ಕಲಿಸಿಕೊಟ್ಟಿದ್ದೇ ಗೆಳತಿ ಸುಚಿತ್ರಾ.ಉತ್ತರ ಭಾರತದ ಹುಡುಗಿ. ವಿಷ್ಣು ಹರಕು-ಮುರುಕು ಹಿಂದಿ ನೋಡಿ ನಗ್ತಾ ಇದ್ದವಳು. ಅರಿವಿಲ್ಲದೇ ಆಕೆಯ ಸ್ನೇಹದಿಂದಾಗಿ ಶಾಯರಿ, ಗಜಲ್‌ಗಳನ್ನು ಹಾಡಲು ವಿಷ್ಣು ಕಲಿತರು. ವಿಷ್ಣು ಜನಪ್ರಿಯತೆ ನೋಡಿ ಖುಷಿ ಪಡೋ ಹುಡುಗಿ. ಆದ್ರೆ, ನಾಗರಹಾವು ಸಿನಿಮಾ ಸೆಲೆಕ್ಟ್ ಆದಾಗ ಕೈಹಿಡಿದು ಬೇಡ ಅಂತಾ ರಿಕ್ವೆಸ್ಟ್ ಮಾಡಿಕೊಂಡಿದ್ದಳಂತೆ.ಆಮೇಲೆ ನಡೆದಿದ್ದುಇನ್ನು ಇಂಟ್ರೆಸ್ಟಿಂಗ್.ಈ ಎಲ್ಲಾ ವಿಷ್ಯಗಳನ್ನು ಸ್ವತಃ ವಿಷ್ಣುವರ್ಧನ್ ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ನೀನು ಬೇರೆಯವ್ರ ಜತೆ ಡುಯೆಟ್ ಆಡೋದು ನಂಗೆ ಇಷ್ಟ ಇಲ್ಲ ಅಂತಾ ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡ ಹುಡುಗಿ ವಿಷ್ಣು ಮನಸ್ಸನ್ನು ತೆರೆಮರೆಯಲ್ಲಿ ಗೆದ್ದಿದ್ದಳು. ನಾನು ಡಾಕ್ಟರ್ ಆಗ್ಬೇಕು ಅಂದುಕೊಂಡಿದ್ದೇನೆ. ನೀನು ಡಾಕ್ಟರ್ ಆಗಬೇಕು ಅಂತಾ ಪಟ್ಟು ಹಿಡಿದಿದ್ದಳು. ಕೊನೆಗೆ ಇಬ್ಬರಿಗೂ ವೈಮನಸ್ಸು ಬಂದು ವಿಷ್ಣು ಹಠ ಹಿಡಿದು ನಾನು ಆಕ್ಟರ್ ಆಗಲೇಬೇಕು ಅಂದುಕೊಂಡಿದ್ದೇನೆ ಎಂದು ನಿರ್ಧಾರವನ್ನು ಕಡ್ಡಿ ಮುರಿದಂತೆ ಹೇಳಿಬಿಟ್ಟರು.
ಫೈನಲ್ ಇಯರ್ ಪರೀಕ್ಷೆ ಮುಗಿದ ನಂತ್ರ ಗುಡ್ ಬೈ ಹೇಳಿ ದಿಲ್ಲಿ ಕಡೆ ಪ್ರಯಾಣ ಬೆಳೆಸಿದ ಸುಚಿತ್ರಾ ಕೊನೆಗೆ ಮತ್ತೆ ವಾಪಾಸ್ ಬಂದಿದ್ದು ರಿಸಲ್ಟ್ ದಿನ. ಅದಾಗ್ಲೇ ನಾಗರಹಾವು ಸಿನಿಮಾ ಸೂಪರ್ ಹಿಟ್ ಆಗಿತ್ತು. ನಾನು ಸಿನಿಮಾ ನೋಡ್ಬೇಕು ಅಂದಾಗ, ಸುಚಿತ್ರಾಳನ್ನು ಸಾಗರ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದರು ವಿಷ್ಣುದಾದ. ಆಕೆಯ ಮನಸ್ಸಿಗೆ ನೋವಾಗದಂತೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಸಿನಿಮಾ ಥಿಯೇಟರ್ ಒಳಗೆ ಬಿಟ್ಟು ಬಂದಿದ್ರು.
ನಂತ್ರ ಸಿನಿಮಾ ಮುಗಿದ್ಮೇಲೆ ಟಿಫಾನಿಸ್ ಹೋಟೆಲ್‌ನಲ್ಲಿ ಇಬ್ಬರೂ ಭಾವುಕರಾಗಿದ್ರು. ಸುಚಿತ್ರಾ ನೀನು ದೊಡ್ಡವನಾಗಿದ್ದೀಯಾ. ಎಲ್ಲರೂ ರಾಮಾಚಾರಿ,ವಿಷ್ಣು ಬಗ್ಗೆಯೇ ಮಾತಾಡ್ತಾರೆ. ಕುಮಾರ್, “ಐ ಸ್ಟಿಲ್ ಹ್ಯಾವ್ ಎ ಪ್ಲೇಸ್ ಯುವರ್ ಹಾರ್ಟ್” ಎಂದು ಪಿಸುಮಾತಿನಲ್ಲಿ ಕೇಳಿದ ಸುಚಿತ್ರಾ ಪ್ರೀತಿಗೆ ವಿಷ್ಣು ಏನು ಹೇಳಬೇಕು ಗೊತ್ತಾಗ್ಲೇ ಇಲ್ಲ. ಆದ್ರೆ, ಸತ್ಯವನ್ನು ಒಪ್ಪಿಕೊಳ್ಳಲೇಬೇಕಿತ್ತು. ನನ್ನ ಮನಸ್ಸಲ್ಲಿ ಇನ್ನೊಬ್ಬರು ಆಲ್‌ರೆಡಿ ಇದ್ದಾರೆ ಅಂತಾ ಭಾರತಿ ಅವ್ರ ಹೆಸರೇಳದೇ ಮಾತು ಮುಗಿಸಿದ್ರು. ಗುಡ್ ಬೈ ಸಿ ಯು ಅಗೈನ್ ಎಂದು ಹೇಳಿ ಹೋದ ಸುಚಿತ್ರಾ ಅವ್ರ ಕೊನೆಯುಸಿರು ಇರುವವರೆಗೂ ಮತ್ತೆಲ್ಲೂ ಕಾಣಲೇ ಇಲ್ಲ. ಆದ್ರೂ ವಿಷ್ಣು ದಿಲ್ಲಿಗೆ ಹೋದಾಗೆಲ್ಲಾ ಸುಚಿತ್ರಾ ಕಾಡುವ ಗೆಳತಿ. ಬೆಳದಿಂಗಳ ಬಾಲೆಯಾಗೇ ಉಳಿದರು.