ಧರ್ಮ‍ಸ್ಥಳ ಕೇಸ್‌ಗೆ ಮತ್ತೊಂದು ಟ್ವಿಸ್ಟ್‌.! ಬಂಗ್ಲೆ ಗುಡ್ಡದಲ್ಲಿ ಮತ್ತೆ ಅಸ್ಥಿಪಂಜರ ಪತ್ತೆ

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ… ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಗಂಭೀರ ಆರೋಪ ಮಾಡಿರುವ ಅನಾಮಿಕನ (ಮಾಸ್ಕ್​ ಮ್ಯಾನ್) ಒಂದೊಂದೇ ಗುಟ್ಟು ಹೊರಗೆ ಬರುತ್ತಿವೆ. ಈಗಾಗಲೇ ಅನಾಮಿಕ ಹೇಳಿದಂತೆ ಎಸ್​ಐಟಿ ಅಧಿಕಾರಿಗಳು ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶದಲ್ಲಿ ಶವ ಶೋಧ ನಡೆಸಿದ್ದು, ಹತ್ತಾರು ಸ್ಥಳಗಳಲ್ಲಿ ಅಗೆದರೂ ಸಹ ಕೇವಲ ಎರಡೇ ಜಾಗದಲ್ಲಿ ಮೂಳೆಗಳು ಪತ್ತೆಯಾಗಿವೆ. ಇದೀಗ ಮಾಸ್ಕ್​ ಮ್ಯಾನ್(ಭೀಮ) ಯಾರು? ಏನು? ಎನ್ನುವುದು ಬೆಳಕಿಗೆ ಬಂದಿದೆ.

ಸ್ನೇಹಿತರೆ… ಮೊದಲಿಗೆ ಮಾಸ್ಕ್‌ ಮ್ಯಾನ್‌ ಗೆಳೆಯ ರಾಜು ಅವ್ರನ್ನು ಮಾತನಾಡಿಸದಾಗ್ಲೀ ಕುಡಿದ ಮತ್ತಿನಲ್ಲೇ ಆತ ಮಾತನಾಡಿದ್ಧಾನೆ.. ಅವನು ಹೇಳಿರೋ ಮಾತುಗಳಲ್ಲಿ ಸತ್ಯವೇ ಇಲ್ಲ ಎನ್ನುವ ಅನುಮಾನಗಳು ಸಹಜವಾಗಿ ಕಾಡುತ್ತಿವೆ…

ಮಂಡ್ಯದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಭೀಮನ ಪತ್ನಿ

ಮಂಡ್ಯದಲ್ಲಿ ಮಾತನಾಡಿರುವ ಅನಾಮಿಕನ ಮೊದಲ ಪತ್ನಿ,1999ರಲ್ಲಿ ಮದುವೆಯಾಗಿದ್ದು, 7 ವರ್ಷ ಸಂಸಾರ ಮಾಡಿದ್ದೆವು‌. ನಮಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಅವನ ಬಳಿ ಒಳ್ಳೆತನ ಇರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದ.ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು. ಧರ್ಮಸ್ಥಳದಲ್ಲಿ ಕಸಗುಡಿಸುವುದು, ಬಾತ್‌ರೂಂ ತೊಳೆಯುವುದು ಮಾಡುತ್ತಿದ್ದರು. ಆದರೆ, ಈಗ ಆತ ನೂರಾರು ಶವ ಹೂತಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳು. ದುಡ್ಡಿನ ಆಮಿಷಕ್ಕೆ ಹೀಗೆ ಮಾಡುತ್ತಿರುಬಹುದು ಎಂದು ಸ್ಫೋಟಕ ವಿಚಾರಗಳನ್ಜು ಬಿಚ್ಚಿಟ್ಟಿದ್ದಾಳೆ.

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು