ಧರ್ಮಸ್ಥಳ ಕೇಸ್: ಸುಳ್ಳು ಸುದ್ದಿಗೆ ತೆರೆ – ಭೀಮ ಬಗ್ಗೆ ಹೋಮ್ ಮಿನಿಸ್ಟರ್‌ನ ಸ್ಪಷ್ಟನೆ!
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ. ಕಳೆದ ವೀಡಿಯೋದಲ್ಲಿ ನಾವೇ
ಅಭಿಪ್ರಾಯಪಟ್ಟಿದ್ವಿ…ಪ್ರತಿ ನಿತ್ಯ ಈ ಸುದ್ದಿವಾಹಿನಿಯ ಮಾಹಿತಿ ಸ್ಫೊಟದಲ್ಲಿ ಜನಸಮಾನ್ಯರ ನಿಲುವುಗಳು ಕೊಚ್ಚಿ
ಹೋಗ್ತಾ ಇವೆ ಅಂತಾ.. ಸ್ನೇಹಿತರೆ.. ಕ್ಷಣಕ್ಕೊಂದು ಮಾಹಿತಿ.. ಧರ್ಮಸ್ಥಳ ಕೇಸ್‌ನಲ್ಲಿ ನಿಮಿಷಕ್ಕೊಂದು
ಜಡ್ಜ್‌ಮೆಂಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪಾಸ್ ಮಾಢ್ತಿರೋದ್ರಿಂದ ಧರ್ಮಸ್ಥಳ ಭಕ್ತಾಧಿಗಳು ಸೇರಿದಂತೆ,
ಧರ್ಮಸ್ಥಳ ಕೇಸ್‌ನಲ್ಲಿ ನ್ಯಾಯ ಭಯಸ್ತಾ ಇರೋ ಅನೇಕರಿಗೆ ಗೊಂದಲ ಉಂಟಾಗಿರೋದಂತೂ ಸತ್ಯವಾದ
ಮಾತು..ಅಸಲಿಗೆ ಇಲ್ಲಿವರೆಗೂ ಎಸ್‌ಐಟಿ ತನಿಖೆಯಲ್ಲಿ ಆಗಿರೋ ಬೆಳವಣಿಗಯನ್ನು ಮಾನ್ಯ ಹೋಮ್ ಮಿನಿಸ್ಟರ್ ಆದ
ಪರಮೇಶ್ವರ್ ಅವ್ರು ಇಂಚು ಇಂಚಾಗಿ ಯಾವುದು ಗೊಂದಲಗಳಿರದಂತೆ ವಿವರವಾಗಿ ಹಂಚಿಕೊಂಡ್ರು..
ಅಸಲಿಗೆ ಭೀಮನನ್ನು ಯಾರು ಚೆನ್ನೈನಿಂದ ಕರೆತಂದಿಲ್ಲ. ಆತನ ಹಿಂದೆ ಯಾವುದೇ ತಂಡ ಕೆಸಲ ಮಾಢ್ತಿಲ್ಲ.. ತಾ ಮುಂದು,
ನಾ ಮುಂದು ಸುದ್ದಿ ಪ್ರವಾಹದ ಧಾವಂತದಲ್ಲಿರೋ ಪ್ರತಿಷ್ಟಿತ ಮಾಧ್ಯಮಗಳು ಎಂದು ಕರೆಸಿಕೊಳ್ಳುವ ವಾಹಿನಿಗಳೇ
ಇಂತದ್ದೊಂದ ತಪ್ಪು ಎಸಗಿದ್ದು ಮಾತ್ರ ದುರದೃಷ್ಟಕರ.. ಅಸಲಿಗೆ ಭೀಮ ಎನ್ನುವ ಹೆಸರಿನ ವ್ಯಕ್ತಿ ಎಸ್‌ಐಟಿ ಮುಂದೆ
ಎಲ್ಲವನ್ನು ಬಾಯಿ ಬಿಟ್ಟಿದ್ದಾನೆ.. 2014 ರ ನಂತ್ರ ನನ್ನನ್ನು ಭೇಟಿಯಾದ ಒಂದು ಟೀಮ್ ನನ್ನ ಬಳಿ ಸುಳ್ಳು ಹೇಳುವಂತೆ
ಒತ್ತಾಯ ಮಾಡ್ತು ಎಂಬ ಶುದ್ದ ಸುಳ್ಳಿನ ಮಾಹಿತಿಯನ್ನು ಹಬ್ಬಿಸಿದ ಜವಾಬ್ದಾರಿ ಮಾಧ್ಯಮಗಳು ಇದಕ್ಕೆ ನೇರ ಹೊಣೆ..
ಇದನ್ನು ನಂಬಿ ಇಲ್ಲಿಯವರೆಗೂ ಭೀಮ ಎಂಬ ಆಗುಂತುಕನ ಮಾತುಗಳಲ್ಲಿ ವಿಶ್ವಾಸ ಇಟ್ಟಿದ್ದ ಕೆಲವ್ರಿಗಂತೂ ಇದು
ಆಘಾತಕಾರಿ ವಿಷ್ಯವಾಗಿ ಹೋಯ್ತು.. ಕೊನೆಗೆ ಹೋಮ್ ಮಿನಿಸ್ಟರ್ ಈ ಎಲ್ಲಾ ಸುಳ್ಳು ಸುದ್ದಿಗಳಿಗೆ ತೆರೆ ಎಳೆದ್ರು..
ಸ್ನೇಹಿತರೆ.. ಖಚಿತವಾಗಿ ಭೀಮ ಎಂಬ ಹೆಸರಿನ ಅನಾಮಿಕ ಎರಡು ಪಾಯಿಂಟ್‌ಗಳಲ್ಲಿ ಎರಡು ಅಸ್ಥಿ ಪಂಜರಗಳನ್ನು
ತೋರಿಸಿದ್ದು ಮಾತ್ರ ಕಟು ಸತ್ಯ.. ಈಗಾಗ್ಲೇ ಎಫ್‌ಎಸ್‌ಎಲ್ ರಿಪೋರ್ಟ್ ಪಡೆಯಲು ಎಸ್‌ಐಟಿ ಟೀಮ್ ಸಿಕ್ಕ
ಕಳೆಬರಹಗಳನ್ನು ಕಳಿಸಿಕೊಟ್ಟಿದೆ.. ಅಲ್ಲಿ ಖಚಿತ ಮಾಹಿತಿ ಸಿಕ್ಕಮೇಲೆ ಮುಂದಿನ ಶೋಧಕಾರ್ಯ.. ಅಲ್ಲಿಯವರೆಗೂ ಈ
ಶೋಧಕಾರ್ಯಕ್ಕೆ ಖುದ್ದು ಎಸೈಟಿ ಟೀಮ್ ತಾತ್ಕಾಲಿಕ ತಡೆ ನೀಡಿದೆ.. ಈ ವಿಷ್ಯದಲ್ಲಿ ಯಾರ ಮಧ್ಯಸ್ಥಿಕೆ ಇಲ್ಲ.. ಒಂದು
ವೇಳೆ ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಸಿಕ್ಕ ಆಧಾರಗಳ ಮೇಲೆ ಸಿಕ್ಕ ಅಸ್ಥಿಪಂಜರಗಳಿಗೆ ಸರಿಯಾದ ದಾಖಲೆಗಳಿಲ್ಲ
ಎಂದಾದ್ರೆ, ಮಿಸ್ಸಿಂಗ್ ಕಂಪ್ಲೆಂಟ್‌ನಲ್ಲಿ ಅವ್ರ ಹೆಸ್ರು ಸಿಕ್ಕರೆ, ಆ ಮೃತದೇಹಗಳ ಸಾವುಗಳು ಅಸ್ವಾಭಾವಿಕವಾಗಿ ಇದ್ದರೆ,
ದೂರುದಾರನ ಮೇಲೆ ವಿಶ್ವಾಸವಿರಿಸಬಹುದು.. ಒಟ್ಟಾರೆಯಾಗಿ ಗೃಹ ಸಚಿವರು ಈ ಕೇಸ್‌ನಲ್ಲಿ ನಾವು ಸತ್ಯವನ್ನು ಮಾತ್ರ
ಕಂಡುಕೊಳ್ಳುತ್ತಿದ್ದೇವೆ.. ಇನ್ನು ವಿಟ್‌ನೆಸ್ ಪ್ರೊಟೆಕ್ಷನ್ ಆಕ್ಟ್ ಪ್ರಕಾರ ಅತನನ್ನು ಪ್ರೊಟೆಕ್ಟ್ ಮಾಢೋ ಜವಾಬ್ದಾರಿ
ಇರೋದ್ರಿಂದ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬರೋದಿಲ್ಲ.. ಹಾಗಾಗಿ ಆತನನ್ನು ಬಯಸಿದವ್ರ ಬಳಿಯೇ ಆತನನ್ನು
ಇರಿಸಬೇಕಾಗುತ್ತದೆ ಅನ್ನೋದನ್ನು ಗೃಹ ಸಚಿವರು ಸ್ಪಷ್ಟನೆ ಕೊಟ್ಟರು..
ಯ್ಯೂಟ್ಯೂಬ್ ವಾಹಿನಿಗಳಿಗೆ ಕರ್ನಾಟಕದ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಸುಪ್ರೀಂ ಕೋರ್ಟ್‌ಗೆ
ಅಪೀಲ್ ಹೋಗಿದ್ದನ್ನು ನೀವೆಲ್ಲರೂ ಗಮನಿಸಿದ್ದೀರಿ.. ಅಲ್ಲಿ ಕೋರ್ಟ್ ಹೇಳಿದ್ದು ನಿಮಗೆ ನೆನಪಿದೆ ಎಂದೇ ಭಾವಿಸ್ತೀನಿ..
ಮಾಧ್ಯಮದ ವಿರುದ್ಧ ನಿರ್ಬಂಧ ಹೇರಬೇಕೇ ಎಂದು ಪ್ರಶ್ನಿಸಿತು. ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್
ಆದೇಶಗಳನ್ನ ಹೊರಡಿಸಲಾಗುತ್ತೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದ್ರೆ
ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು.
ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ ಪರಿಗಣಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತ್ತು..
ಹಾಗಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಈ ವಿಷಯದ ಬಗ್ಗೆ ವಾದ ಮಂಡನೆ ಮಾಡಲಿ, ವಾದ ಆಲಿಸಿ ಕೆಳ
ನ್ಯಾಯಾಲಯ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಪೀಠ ಹೇಳಿತು.ಅದಕ್ಕೆ ಸಂಬಂಧ ಪಟ್ಟ ಹಾಗೆ ಕೆಲವು
ವಕೀಲರು ಇವತ್ತು ಮಹೇಶ್ ತಿಮರೋಡ್ಡಿ ಮನೆಗೆ ನೇರವಾಗಿ ವಕೀಲರ ತಂಡ ಆಗಮಿಸಿತ್ತು.. ಯಾವುದೇ ಐಡಿ ಕಾರ್ಡ್
ಹಾಗೂ ಸ್ಥಳಿಯ ಪೊಲೀಸರ ಅನುಮತಿ ಇಲ್ಲದೇ ಬಂದಿದ್ದ ತಂಡದ ವಿರುದ್ಧವಾಗಿ ಒಂದಿಷ್ಟು ವಾಗ್ವಾದಗಳು ನಡೆದ್ವು..
ಇದಕ್ಕೆ ಸಂಬಂಧಪಟ್ಟ ಹಾಗೆ ಅಲ್ಲಿ ಏನಾಯ್ತು ಅನ್ನೋ ವೀಡಿಯೋ ಜೊತೆಗೆ ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಇದನ್ನು