“ಧರ್ಮಸ್ಥಳ ಕೇಸ್ ಕ್ಲೈಮ್ಯಾಕ್ಸ್‌ಗೆ ಮುನ್ನ ಮತ್ತೊಂದು ಸ್ಪೋಟಕ ಟ್ವಿಸ್ಟ್ – ಡಬಲ್ ಮರ್ಡರ್ ದೂರು”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಧರ್ಮಸ್ಥಳ ಕೇಸ್‌ಗೆ ಇವತ್ತೇ ಕ್ಲೈಮ್ಯಾಕ್ಸ್
ಅಂತಾ ಕೆಲವ್ರು ಅಭಿಪ್ರಾಯ ಪಡ್ತಿದ್ದಾರೆ.. ಇವತ್ತ ಗೃಹ ಸಚಿವರು ಅಧಿವೇಶನದಲ್ಲಿ ಎಲ್ಲೂ ಕುತೂಹಲಗಳಿಗೂ ಎಸ್‌ಐಟಿ
ತನಿಖಾ ವರದಿಯನ್ನು ನೀಡ್ತಾರೆ ಅನ್ನೋ ಭರವಸೆ ಮೇಲೆ ಆಡಳಿತ ಪಕ್ಷಗಳು ಬೆರಗುಗಣ್ಣಿನಿಂದ ಎದುರುನೋಡ್ತಿವೆ. ಭೀಮ
ಎಂಬ ಹೆಸರಿನ ದೂರುದಾರ ಹೇಳಿದ್ದೆಲ್ಲವೂ ಸುಳ್ಳಾ ಹಾಗಾದ್ರೆ, ಇವತ್ತಿಗೆ ಎಸ್‌ಐಟಿ ಕ್ಲೋಸ್ ಮಾಡಲಾಗುತ್ತಾ..?
ಅಥವಾ ಮುಂದಿನ ಪಾಯಿಂಟ್‌ಗಳ ಕಡೆಗೆ ಎಸ್‌ಐಟಿ ಶೋಧಕಾರ್ಯ ಮುಂದುವರೆಸುತ್ತಾ ಎಲ್ಲಾ ಸ್ಪಷ್ಟತೆಗಳಿಗೆ ಇವತ್ತು
ಅಂತಿಮ ದಿನ ಅನ್ನೋ ಮಾತಂತೂ ಸ್ಪಷ್ಟ… ಆದ್ರೆ, ಅಸಲಿಗೆ ಧರ್ಮಸ್ತಳ ಕೇಸ್ ಇದು ಮುಗಿಯೋ ಹಾಗೆ ಕಾಣಿಸ್ತಿಲ್ಲ
ಅನ್ನೋದಕ್ಕೆ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.. ಪದೇ ಪದೇ ಕೇಳಿ ಬರ್ತಿರೋ ದೂರುಗಳು, ಮುನ್ನೆಲೆಗೆ ಬರ್ತಿರೋ
ಹಳೆಯ ಪ್ರಕರಣಗಳೇ ಎಸ್‌ಐಟಿಗೆ ಸವಾಲಾಗಿ ಪರಿಣಮಿಸಿವೆ… ಇವೆಲ್ಲಾ ಕೇಸ್‌ಗಳನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡು
ಎಸ್‌ಐಟಿ ಇನ್ವಿಸ್ಟಿಗೇಷನ್ ನಡೆಸಿದ್ರೆ, ಇದಕ್ಕೆ ಮತ್ತೊಂದು ರೋಚಕ ತಿರುವು ಸಿಗಲಿದೆ… ಅಸಲಿಗೆ ಏನಿದು ಮತ್ತೊಂದು
ಕಂಪ್ಲೆಂಟ್ ಅನ್ನೋದನ್ನು ಡೀಟೈಲ್ ಆಗಿ ನೋಡ್ಥಾ ಹೋಗೋಣ..
ಸ್ನೇಹಿತರೆ, ಭೂವಿವಾದಕ್ಕೆ ಸಂಬಂಧ ಪಟ್ಟ ಹಾಗೆ ಧರ್ಮಸ್ಥಳದಲ್ಲಿ ನಡೆದಂತ ಡಬಲ್ ಮರ್ಡರ್ ಪ್ರಕರಣಕ್ಕೆ
ಸಂಬಂಧಪಟ್ಟ ಹಾಗೆ ಇವತ್ತು ಮತ್ತೊಂದು ಕೇಸ್ ಬೆಳ್ತಂಗಡಿ ಸ್ಟೇಷನ್‌ನಲ್ಲಿ ದಾಖಲಾಗಲಿದೆ.. ಹಾಗಾಗಿ ಈ ಕೇಸ್‌ನಲ್ಲಿ
ಮುಚ್ಚಿ ಹೋದ ಭಯಾನಕ ಕಥೆಗಳು ಮತ್ತೆ ಜೀವಂತವಾಗ್ತಿವೆ.. ಆನೆ ಮಾವುತ ಮತ್ತು ಅವರ ತಂಗಿಯನ್ನು ಭೂ ವಿವಾದದ
ಹಿನ್ನೆಲೆಯಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ, ಅವರ ಮಕ್ಕಳು ಎಸ್‌ಐಟಿ ಕಚೇರಿಗೆ ಅಧಿಕೃತವಾಗಿ ದೂರನ್ನು
ಕೊಡ್ತಿದ್ದಾರೆ..ಸ್ನೇಹಿತರೆ ಏನಿದು ಭೂ ವಿವಾದ, ಈ ಕೇಸ್‌ನಲ್ಲಿ ಆಗಿದ್ದೇನು. ಆದ ಅನ್ಯಾಯವೇನು..? ಅನ್ನೋದಕ್ಕೆ
ಇಲ್ಲಿದೆ ಉತ್ತರ.. ಈ ಕೇಸ್‌ನಲ್ಲಿ ಮೃತಪಟ್ಟ ನಾರಾಯಣನ ಹೆಂಡತಿ ಸುಂದರಿ ಇವತ್ತು ದೂರು ದಾಖಲಿಸಲು
ಮುಂದಾಗಿದ್ದಾರೆ.. ಸದ್ಯ, ಸುಂದರಿ ಎನ್ನುವ ಮಹಿಳೆ ಕಲ್ಲಗುಡ್ಡೆ ಮನೆ, ಮೇಲಂತಬೆಟ್ಟು ಗ್ರಾಮ, ಬೆಳ್ತಂಗಡಿ ಗ್ರಾಮದಲ್ಲಿ
ಮಕ್ಕಳೊಂದಿಗೆ ವಾಸ ಮಾಡ್ತಾ ಇದ್ದಾರೆ.. ಆಕೆ ಕೊಟ್ಟಿರೋ ದೂರಿನಲ್ಲೀ ಏನಿದೆ ಅಂದ್ರೆ,,,