“ಅಜಯ್ ರಾವ್ – ಸ್ವಪ್ನಾ ರಾವ್ ದಾಂಪತ್ಯದಲ್ಲಿ ಬಿರುಕು? ಕೋರ್ಟ್ ಮೆಟ್ಟಿಲೇರಿದ ಪತ್ನಿ”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಜನರೇಷನ್ ಯಾವ ಕಡೆ ಸಾಗ್ತಿದೆಯೋ ಗೊತ್ತಿಲ್ಲ..ನಾವೆಲ್ಲಾ
ಈ ಜೋಡಿ ಮಾತ್ರ ಯಾವ ಕಾರಣಕ್ಕೂ ಬೇರೆ ಆಗೋದಿಲ್ಲ ಅಂತಾ ಯಾರ ಬಗ್ಗೆ ಪಾಸಿಟಿವ್ ಕಮೆಂಟ್ಸ್ ಮಾಡ್ತಾ
ಇರ್ತೀವೋ ಅವ್ರೆಲ್ಲಾ ಈಗ ಎಲ್ಲರಿಗೂ ಶಾಕ್ ಕೊಡ್ತಾ ಇದ್ದಾರೆ..ಒಂದ್ಕಡೆ ಸಿನಿಮಾದೋರೆ ಹೀಗೆ ಅಂತಾ
ಸುಮ್ನಿರಬೇಕೋ.. ಅಥವಾ ಅವ್ರವ್ರ ಲೈಫ್ನಲ್ಲಿ ಏನೆಲ್ಲಾ ಪ್ರಾಬ್ಲಮ್ ಇರುತ್ತೋ ಯಾರಿಗೆ ಗೊತ್ತು ಅಲ್ವಾ ಅಂತಾ
ಸುಮ್ನಿರಬೇಕೋ ಗೊತ್ತಾಗ್ತಿಲ್ಲ.. ಎಲ್ಲರೂ ಇಂಡಿಪೆಂಡೆಂಟ್ ಆಗಲಿಕ್ಕೆ ಇಷ್ಟ ಪಡ್ತಾ ಇದ್ದಾರೋ ಅಥವಾ ಒಟ್ಟಿಗೆ
ಬಾಳುವಷ್ಟು, ಸೋಲುವಷ್ಟು, ಯಾರಿಗೂ ಇಷ್ಟವಿಲ್ಲವೋ.. ಏನಾಗ್ತಿದೆ ಅನ್ನೋದನ್ನು ಜಡ್ಜ್ ಮಾಡೋದೆ ಕಷ್ಟ..
ಸ್ಯಾಂಡಲ್ವುಡ್ ಕೃಷ್ಣ ಎಂದೇ ಖ್ಯಾತಿ ಪಡೆದಿದ್ದ ನಟನಿಗೆ ಕೃಷ್ಣ ಜನ್ಮಾಷ್ಟಮಿ ದಿನವೇ ಇಂತದ್ದೊಂದು ಕೆಟ್ಟ
ಸುದ್ದಿಯನ್ನು ಕೇಳುವಂತಾಗಿರೋದು ದುರದೃಷ್ಟಕರ..
ನಟ ಅಜಯ್ ರಾವ್ ಹಾಗೂ ಹಾಗೂ ಪತ್ನಿ ಸ್ವಪ್ನ ರಾವ್ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್
ಇಡಲು ನಿರ್ಧರಿಸಿಬಿಟ್ಟರೇ ಅನ್ನೋ ಅನುಮಾನಗಳು ಕಾಡ್ಥಾ ಇವೆ.. ಅದಕ್ಕೆ ಕಾರಣ ಕೂಡ ಇದೆ.. ಅಸಲಿಗೆ ಅಜಯ್ರಾವ್
ಪತ್ನಿ ಸ್ವಪ್ನರಾವ್ ಪತಿಯ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ.. ಅದೂ ಕೂಡ ಕೌಟಂಬಿಕ ದೌರ್ಜನ್ಯದ ಕೇಸ್
ಹಾಕಿದ್ದಾರೆ.ಸ್ನೇಹಿತರೆ.. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಇದೇ ರೀತಿಯ ಕೇಸ್ ಹಾಕಿದ್ದನ್ನು ನಾವು
ನೆನಪಿಸಿಕೊಳ್ಳಬಹುದು.. .ಅಸಲಿಗೆ ಈ ಜೋಡಿ ಮಧ್ಯೆ ಬಿರುಕು ಉಂಟು ಮಾಡಿದ್ದೇನು..? ಏನಾಯ್ತು ಈ ಕ್ಯೂಟ್
ಕಪಲ್ಸ್ಗೆ ಅನ್ನೋದನ್ನು ನೋಡ್ತಾ ಹೋಗೋಣ..
2014 ಡಿಸೆಂಬರ್ 18 ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದ ಅಜಯ್ ರಾವ್ ಹಾಗೂ ಸ್ವಪ್ನರಾವ್
ಮಗಳಾದ ಚರೀಷ್ಮಾ ಜೊತೆ ತುಂಬಾ ಖುಷಿಯಾಗಿ ಜೀವನ ನಡೆಸ್ತಾ ಇದ್ದಂತ ಸ್ಟಾರ್ ಕಪಲ್ಸ್ಗಳಲ್ಲಿ ಒಬ್ಬರು..
ಮದ್ವೆಯಾದ ದಿನದಿಂದ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ.. ಎಲ್ಲೂ ಇಬ್ಬರ ನಡುವಿನ ಬಿರುಕಿನ
ಸುದ್ದಿಗಳು ಹರಿದಾಡಿರಲಿಲ್ಲ.. ಇದೀಗ ಏಕಾಏಕಿ ಸ್ವಪ್ನಾ ರಾವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಎಲ್ಲಾ
ಫೋಟೋ ಡಿಲೀಟ್ ಮಾಡಿದ್ದಲ್ಲದೇ,ಗಂಡನ ದೌರ್ಜನ್ಯವನ್ನು ಕೋರ್ಟ್ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ..
ಮದುವೆಯಾದ 11 ವರ್ಷದ ಬಳಿಕ ಇದೀಗ ಈ ದಂಪತಿ ಬೇರಾಗ್ತಾರೆ ಅನ್ನೋ ಸುದ್ದಿ ಸಿನಿಪ್ರಿಯರಿಗಂತೂ ಶಾಕ್
ನೀಡಿದ್ದಲ್ಲದೇ, ವೈಯಕ್ತಿಕ ಜೀವನದ ಏಳು ಬೀಳುಗಳೇ ಅಜಯ್ ರಾವ್ ಲೈಫ್ಗೆ ಮುಳ್ಳಾಯ್ತಾ ಅನ್ನೋ ಮಾತುಗಳು
ಕೇಳಿ ಬರ್ತಿವೆ..
ಸ್ನೇಹಿತರೆ.. ಹಾಗಾದ್ರೆ, ಅಜಯ್ ರಾವ್ ಲೈಫ್ನಲ್ಲಿ ಬ್ಯಾಕ್ ಟು ಬ್ಯಾಕ್ ನೋವುಗಳೇ ಅವ್ರನ್ನು ಭಾಧಿಸ್ತಾ ಇವೆ..
ಆರಂಭದಲ್ಲಿ ಎಕ್ಸ್ಕ್ಯೂಸ್ಮೀ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಸೆಟಲ್ ಆಗಿದ್ದ ನಟ.. ಸಾಲು ಸಾಲು
ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ದ ನಟ.. ಆದ್ರೆಎ, ಇತ್ತೀಚೆಗೆ ಅವ್ರ ಸಿನಿಮಾಗಳು ಬ್ಲಾಕ್ಲಿಸ್ಟ್ಗೆ
ಸೇರಿದಂತಾಗಿದ್ದವು.. ಯಾವುದೇ ಸಿನಿಮಾಗಳು ಇತ್ತೀಚೆಗೆ ಹಿಟ್ ಆಗಿರಲಿಲ್ಲ.. ತುಂಬಾ ಸರಳವಾಗಿದ್ದ ವ್ಯಕ್ತಿ.. ಸೋಸೈಟಿ
ಬಗ್ಗೆ ಕನ್ಸರ್ನ್ ಇದ್ದಂತಹ ವ್ಯಕ್ತಿ.. ಆದ್ರೆ, ಅದ್ಯಾಕೋ ಗೊತ್ತಿಲ್ಲ.. ಪರ್ಸನಲ್ ಲೈಫ್ನಲ್ಲಿ ಹೆಂಡ್ತಿಗೆ ಇಷ್ಟೆಲ್ಲಾ
ಕಿರುಕುಳ ಕೊಡುವಂತಹ ವ್ಯಕ್ತಿನಾ..???? ಅಷ್ಟೊಂದು ಟಾರ್ಚರ್ ಕೊಡುವಂತಹ ವ್ಯಕ್ತಿನಾ ಅನ್ನೋ ಅನುಮಾನಗಳು
ಕಾಡ್ತಿರೋದು.. ಇದಕ್ಕೆಲ್ಲಾ ಸ್ವಪ್ನಾ ಬಳಿಯೇ ಉತ್ತರವಿದೆ ಅನ್ನೋದಂತು ಸತ್ಯ.. ಅಂಡರ್ ಸೆಕ್ಷನ್ 12 ರ ಅಡಿಯಲ್ಲಿ..
ಡೊಮೆಸ್ಟಿಕ್ ಕೋರ್ಟ್ನಲ್ಲಿ ಕೇಸ್ ದಾಖಲಿಸಲಾಗಿದ್ದು, ಮುಂದೆ ಡಿವೋರ್ಸ್ ಹಂತಕ್ಕೆ ಹೋದ್ರು ಅಚ್ಚರಿ ಏನಿಲ್ಲ
..ಯಾಕಂದ್ರೆ,, ಇಲ್ಲಿವರೆಗೂ ಮಾನಹಾನಿ ಮಾಡಿದ ಮೇಲೆ ಹೆಚ್ಚಾಗಿ ಒಟ್ಟಾಗಿ ಬಾಳಿರೋ ಹೆಚ್ಚಿನ ಉದಾಹರಣೆಗಳು ಕೂಡ
ಇಲ್ಲ..
ಇತ್ತೀಚೆಗೆ. . ಮುಹೂರ್ತ ಮತ್ತು ನಂಬಿಕೆಗಳ ಬಗ್ಗೆ ಮಾತನಾಡಿದ ಅಜಯ್ ರಾವ್, “ಶಾಸ್ತ್ರ ಮತ್ತು ಸಂಪ್ರದಾಯಗಳನ್ನು
ನಾನು ನಂಬುತ್ತೇನೆ ಆದರೆ, ನಾನು ಅದನ್ನು ಫಾಲೋ ಮಾಡೋದಿಲ್ಲ. ನಾನು ಮದುವೆಯಾಗಿದ್ದು ಕೂಡ ತಪ್ಪು
ಮುಹೂರ್ತದಲ್ಲಿ. ʻನೀವಿಬ್ಬರು ಒಂದು ವರ್ಷವೂ ಜೊತೆ ಇರಲ್ಲ, ಡಿವೋರ್ಸ್ ಆಗುತ್ತದೆʼ ಅಂತ ಯಾರೋ ಒಬ್ಬರು
ಹೇಳಿದ್ದರು. ಆದರೆ ಎಲ್ಲವೂ ಸರಿಯಿದೆ. ಜೀವನದಲ್ಲಿ ಏನೇ ಬಂದರೂ ನಾನು ಸ್ವೀಕರಿಸುತ್ತೇನೆ” ಎಂದು ನಟ ಅಜಯ್
ರಾವ್ ಹೇಳಿಕೊಂಡಿದ್ದರು.
ಯುದ್ಧಕಾಂಡ 2 ಸಿನಿಮಾದ ನಿರ್ಮಾಪಕರಾಗಿದ್ದ ಅಜಯ್ ರಾವ್ ತುಂಬಾ ನೋವಿನಲ್ಲಿದ್ದರು.. ಯಾಕೆ ಅಂಧ್ರೆ. ಸಿನಿಮಾ
ಬಗ್ಗೆ ಒಳ್ಳೇ ರಿವ್ಯೂ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಬೆಳ್ಳಿ ತೆರೆಯ ಮೇಲೆ ಅಷ್ಟೇನೂ ಕಲೆಕ್ಷನ್ ಮಾಡಿರಲಿಲ್ಲ.. ಕಾರ್
ಕೂಡ ಮಾರಿದ್ದರೂ.. ಯುದ್ಧಕಾಂಡ ಚಿತ್ರಕ್ಕೆ ದುಡ್ಡುಹಾಕಿದ್ದ ಅಜಯ್ ರಾವ್ ಕೋಟಿ ಕೋಟಿ ಸಾಲ ಕೂಡ
ಮಾಡಿಕೊಂಡಿದ್ದರು. ಚಿತ್ರಕ್ಕೆ ದುಡ್ಡು ಕಡಿಮೆ ಬಿದ್ದಾಗ ತಮ್ಮ ಪ್ರೀತಿಯ BMW ಕಾರ್ ಅನ್ನೂ ಮಾರಿ ಸಿನಿಮಾಗೆ
ಸುರಿದಿದ್ರು.. ಹಾಗಾಗಿ ವೈಯಕ್ತಿಕ ಜೀವನದಲ್ಲಿ ಏನಾದ್ರೂ ಇದ್ರಿಂದ ಮನಸ್ಥಾಪ ಬಂಥಾ ಗೊತ್ತಿಲ್ಲ.. ಇತ್ತೀಚೆಗೆ ಹೊಸ
ವಿಲ್ಲಾ ತೆಗೆದುಕೊಂಡು ಮನೆ ಗೃಹ ಪ್ರವೇಶ ಮಾಡಿದ್ದ ಅಜಯ್ ರಾವ್ ಮನೆಗೂ ಸಾಲ ಮಾಡಿದ್ರಾ ಅನ್ನೋ ಮಾತುಗಳು
ಕೇಳಿ ಬರ್ತಿವೆ..
‘ದುಡ್ಡೇ ದೊಡ್ಡಪ್ಪ’ ಎಂಬುದು ಈಗಿನ ಕಾಲದಲ್ಲಿ ಎಲ್ಲರ ವಿಷಯದಲ್ಲೂ ನಿಜವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ
ಸೆಲೆಬ್ರಿಟಿಗಳ ವಿಷಯದಲ್ಲಿ ಇದು ತುಂಬಾ ಬೇಗ ನಿಜವಾಗುವ ಸಂದರ್ಭ ಹೆಚ್ಚು. ಕಾರಣ, ಅವರ ಲೈಫ್ಸ್ಟೈಲ್ ಹಾಗು
ಅತಿಯಾದ ನಿರೀಕ್ಷೆಗಳು ಎನ್ನಬಹುದೇನೋ. ಆದರೆ, ನಿರ್ಧಿಷ್ವವಾಗಿ ಅಜಯ್ ರಾವ್-ಸ್ವಪ್ನಾ ರಾವ್ ದಾಂಪತ್ಯದ
ವಿಷಯದಲ್ಲಿ ಏನಾಗಿದೆ ಎಂಬುದು ಇನ್ನಷ್ಟೇ ತಿಳುದುಬರಬೇಕಿದೆ.
ಸ್ವಪ್ನಾನೇ ಕೇಳಿ.. ಅವ್ರನ್ನೇ ಕೇಳಿ.. ನಂಗೇನೂ ಗೊತ್ತಿಲ್ಲ..