Sudhakar’s wife’s account; ಸುಧಾಕರ್ ಪತ್ನಿ ಖಾತೆಯಿಂದ ವರ್ಗಾವಣೆಯಾಗಿದ್ದ 14 ಲಕ್ಷ ರೂ. ಪ್ರೀತಿ ಖಾತೆಗೆ ವಾಪಸ್
ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಸುಧಾಕರ್ ಪತ್ನಿ ಪ್ರೀತಿ ಅವರಿಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ, 14 ಲಕ್ಷ ರೂಪಾಯಿ ಹಣವನ್ನು ದೊಚಿದ್ದರು. ಬೆಂಗಳೂರು ಸೈಬರ್ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ಮಾಡಿ, ಖದೀಮರು ದೋಚಿದ್ದ ಎಲ್ಲ 14 ಲಕ್ಷ ರೂಪಾಯಿ ಹಣವನ್ನು ಮತ್ತೆ ಡಾ.ಪ್ರೀತಿ ಸುಧಾಕರ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಸುಧಾಕರ್ ಪತ್ನಿ ಪ್ರೀತಿ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ, 14 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡ ಪ್ರಕರಣದಲ್ಲಿ ಬೆಂಗಳೂರು ಸೈಬರ್ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ಮಾಡಿದ್ದಾರೆ. ಖದೀಮರು ದೋಚಿದ್ದ ಎಲ್ಲ 14 ಲಕ್ಷ ರೂಪಾಯಿ ಹಣವನ್ನು ಮತ್ತೆ ಡಾ.ಪ್ರೀತಿ ಸುಧಾಕರ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದಾರೆ.
ಪಶ್ಚಿಮ ವಿಭಾಗ ಸೈಬರ್ ಠಾಣೆ ಎಸಿಪಿ ಉಮಾ ರಾಣಿ ಅತೀ ವೇಗದ ತನಿಖೆಯಿಂದ ಹಣ ವಾಪಸ್ ಬಂದಿದೆ. ಆಗಸ್ಟ್ 26 ರಂದು ಎಂಪಿ.ಕೆ.ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಆಗಿತ್ತು . ಬೆಂಗಳೂರಿನ ಬಸವೇಶ್ವರ ನಗರದ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿನ ಪ್ರೀತಿಯವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿತ್ತು. ಹಣ ವರ್ಗಾವಣೆ ಬಳಿಕ ಕೂಡಲೇ ಪಶ್ಚಿಮ ಸೆನ್ ಪೊಲೀಸ್ ಠಾಣೆಗೆ ಸುಧಾಕರ್ ಪತ್ನಿ ಪ್ರೀತಿ ದೂರು ನೀಡಿದ್ದರು.
ದೂರು ಸ್ವೀಕರಿಸಿ ಕಾರ್ಯಪ್ರವೃತ್ತರಾಗಿದ್ದ ಸೈಬರ್ ಠಾಣೆ ಎಸಿಪಿ ಉಮಾ ರಾಣಿ,… ಕೂಡಲೇ ಬಸವೇಶ್ವರ ನಗರದ ಹೆಚ್ ಡಿಎಫ್ ಸಿ ಬ್ಯಾಂಕ್ ಗೆ ಹೋಗಿ ಹಣ ವರ್ಗಾವಣೆ ಆಗದಂತೆ ತಡೆದಿದ್ದರು. ಇದರಿಂದ ವಂಚಕರ ಖಾತೆಗೆ ಹೋಗುವ ಹಣ ಸ್ಥಗಿತಗೊಂಡಿತ್ತು. ವಂಚಕರು ನೀಡಿದ್ದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಬ್ಯಾಂಕ್ ಮೂಲಕ ಸೈಬರ್ ಪೊಲೀಸರು ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಡಾಕ್ಟರ್ ಪ್ರೀತಿ ಸುಧಾಕರ್ ಅವರ 14 ಲಕ್ಷ ರೂಪಾಯಿ ಹಣವೂ ಸಂಪೂರ್ಣವಾಗಿ ಅವರ ಬ್ಯಾಂಕ್ ಖಾತೆಗೆ ಬರಲು ಸಹಾಯವಾಯಿತು.
ಈ ಕೇಸ್ ಬಗ್ಗೆ ಪಶ್ಟಿಮ ವಿಭಾಗದ ಡಿಸಿಪಿ ಡಾ.ಗೀರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಅಕೌಂಟ್ ಗೆ ಹಣ ಬಂದಿದೆ, ನಿಮ್ಮನ್ನು ಅರೆಸ್ಟ್ ಮಾಡಬಾರದು ಅಂದ್ರೆ ನಾವು ಹೇಳುವ ಖಾತೆಗೆ ಹಣ ಸಂದಾಯ ಮಾಡಲು ಹೇಳಿದ್ರು. ಹೀಗಾಗಿ ಹಣ ಸಂದಾಯ ಮಾಡಲಾಗಿತ್ತು. ಅನುಮಾನ ಬಂದು ಹಣ ಕಳೆದುಕೊಂಡ ಡಾಕ್ಟರ್ ಪ್ರೀತಿ ದೂರು ಕೊಟ್ಟಿದ್ದರು.
ಕಳೆದ ತಿಂಗಳು 26 ರಂದು ದೂರು ಕೊಟ್ಟಿದ್ದರು. ಬೆದರಿಸಿ, 14 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಘಟನೆ ನಡೆದ ದಿನವೇ ಪ್ರೀತಿ ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ನಾವು ಕಾರ್ಯಪ್ರವೃತ್ತರಾಗಿ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಗಳನ್ನು ಫ್ರಿಜ್ ಮಾಡಿಸಿದ್ದೇವೆ. ಕೋರ್ಟ್ ಮೂಲಕ ಸಂಪೂರ್ಣ ಹಣವನ್ನು ಮಹಿಳೆಗೆ ವಾಪಸ್ ಕೊಡಿಸಿದ್ದೇವೆ. …ಇದು ಡಿಜಿಟಲ್ ಅರೆಸ್ಟ್ ಪ್ರಕರಣವಾಗಿದೆ. ಮುಂಬೈ ಪೊಲೀಸರು, ಬೇರೆ ರಾಜ್ಯದ ಪೊಲೀಸರು ಎಂದು ಬೆದರಿಸಿ ವಂಚಿಸುತ್ತಾರೆ. ಮುಂದೆ ಯಾರಾದ್ರೂ ಈ ರೀತಿ ಕರೆ ಮಾಡಿ ಬೆದರಿಸಿದ್ರೆ ಪೊಲೀಸರ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ